ಜೆಡಿಎಸ್-ಬಿಜೆಪಿ ಬೆಂಬಲಿತರಿಂದ ನಾಮಪತ್ರ ಸಲ್ಲಿಕೆ

13kkr1( 2-25 society ele anegula namapatra
ಕಿಕ್ಕೇರಿ ಹೋಬಳಿಯ ಆನೆಗೊಳ ಗ್ರಾಮದಲ್ಲಿ ಫೆ.23ರಂದು ನಡೆಯಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಗುರುವಾರ ಜೆಡಿಎಸ್, ಬಿಜೆಪಿ ಮೈತ್ರಿ ಬೆಂಬಲಿತ ಸದಸ್ಯರು ನಾಮಪತ್ರ ಸಲ್ಲಿಸಿದರು. ಸಿ.ಎನ್. ಪುಟ್ಟಸ್ವಾಮಿಗೌಡ, ಬಿ.ಎಂ. ಕಿರಣ್, ಐಕನಹಳ್ಳಿ ಕೃಷ್ಣೇಗೌಡ, ಕಾಯಿ ಮಂಜೇಗೌಡ, ಐನೋರಹಳ್ಳಿ ಮಲ್ಲೇಶ್, ಕಡಹೆಮ್ಮಿಗೆ ರಮೇಶ್ ಮತ್ತಿತರರಿದ್ದರು.
Published on

ಕಿಕ್ಕೇರಿ: ಹೋಬಳಿಯ ಆನೆಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಆಯ್ಕೆ ಚುನಾವಣೆಗೆ ಜೆಡಿಎಸ್ ಬೆಂಬಲಿತ 11 ಸದಸ್ಯರು (ಸಾಲಗಾರರಲ್ಲದ ಕ್ಷೇತ್ರ-1, ಸಾಲಗಾರರ ಕ್ಷೇತ್ರದಿಂದ 10) ಗುರುವಾರ ನಾಮಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿಗೌಡ, ಕೆ.ಆರ್.ಪೇಟೆ ತಾಲೂಕಿನಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ಬಲು ಗಟ್ಟಿಯಾಗಿದ್ದು ರೈತರ ಸಮಸ್ಯೆಗಳ ಪರಿಹಾರಕ್ಕೆ ಅನುಕೂಲವಾಗುವ ವಾತಾವರಣ ನಿರ್ಮಿತವಾಗಿದೆ ಎಂದರು.

ಇದೇ ಫೆ.23ರಂದು ಚುನಾವಣೆ ನಡೆಯಲಿದೆ. ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದ ಒಂದು ನಿರ್ದೇಶಕ ಸ್ಥಾನ ಆಯ್ಕೆಗಾಗಿ ಬಿ.ಎಂ. ಕಿರಣ್, ಸಾಲಗಾರರ ಕ್ಷೇತ್ರದ ಸಾಮಾನ್ಯ ವಿಭಾಗದ 5 ನಿರ್ದೇಶಕರ ಸ್ಥಾನಕ್ಕೆ ಚಿಕ್ಕತರಹಳ್ಳಿ ಸಿ.ಆರ್. ಮಧು, ದೊಡ್ಡತರಹಳ್ಳಿ ಮಂಜುನಾಥ, ಆನೆಗೊಳ ಗಣೇಶ, ಅಂಚೆಬೀರನಹಳ್ಳಿ ನಂಜುಂಡೇಗೌಡ, ಬೋಳಮಾರನಹಳ್ಳಿ ಲಿಂಗರಾಜು, ಪ್ರವರ್ಗ ಬಿ ಒಂದು ನಿರ್ದೇಶಕ ಸ್ಥಾನಕ್ಕೆ ಐಕನಹಳ್ಳಿ ಐ.ಡಿ. ಉದಯಶಂಕರ್, ಮಹಿಳಾ ಮೀಸಲು ಒಂದು ಸ್ಥಾನಕ್ಕೆ ಅಂಕನಹಳ್ಳಿ ರತ್ನಮ್ಮ, ಪ್ರವರ್ಗ ಎ ಒಂದು ಸ್ಥಾನಕ್ಕೆ ಕಡಹೆಮ್ಮಿಗೆ ತಿಮ್ಮೇಗೌಡ, ಪರಿಶಿಷ್ಟ ಜಾತಿ ಒಂದು ಸ್ಥಾನಕ್ಕೆ ತುಳಸಿ ಜವರಯ್ಯ ನಾಮಪತ್ರ ಸಲ್ಲಿಸಿದರು.

ಜೆಡಿಎಸ್ ಮುಖಂಡರಾದ ಬಿ.ಎಸ್. ಬೋಳಮಾರನಹಳ್ಳಿ ಮಂಜುನಾಥ್, ಹೋಬಳಿ ಅಧ್ಯಕ್ಷ ಕಾಯಿ ಮಂಜೇಗೌಡ, ಕೆಪಿಎಸ್ ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ, ಐನೋರಹಳ್ಳಿ ಮಲ್ಲೇಶ್, ಶಿಶುಪಾಲ, ದಾನಶೇಖರ್, ವೆಂಕಟೇಶ್, ಆನೆಗೊಳ ಗ್ರಾಪಂ. ಮಾಜಿ ಉಪಾಧ್ಯಕ್ಷ ಕಡಹೆಮ್ಮಿಗೆ ರಮೇಶ್, ಕೋಳಿ ವೆಂಕಟೇಶ್, ಬಿಜೆಪಿ ಮುಖಂಡ ತುಳಸಿ ರಮೇಶ್, ಲಕ್ಕೇಗೌಡ, ಡಾಬಾ ಶಂಕರ್, ನಂಜೇಶ್, ಪರ್ವತರಾಜು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net