ಅಲೆಮಾರಿಗಳಿಗೆ ಸಿಕ್ಕಿಲ್ಲ ಸೌಲಭ್ಯ-ಕೆಪಿಸಿಸಿ ಸಾಮಾಜಿಕ ನ್ಯಾಯ ವಿಭಾಗದ ಮಾರೆಪ್ಪ ಆರೋಪ

Kampli Alemari Community
ಕಂಪ್ಲಿಯ ಅಲೆಮಾರಿ ಸಮುದಾಯದವರೊಂದಿಗೆ ಕೆಪಿಸಿಸಿ ಸಾಮಾಜಿಕ ನ್ಯಾಯ ವಿಭಾಗದ ರಾಜ್ಯ ಉಪಾಧ್ಯಕ್ಷ ಬಿ.ಸಣ್ಣ ಮಾರೆಪ್ಪ ಸಮಾಲೋಚಿಸಿದರು.
Published on

ಕಂಪ್ಲಿ: ಅಲೆಮಾರಿಗಳಿಗೆ ಬಿಜೆಪಿ ಸರ್ಕಾರದಿಂದ ಯಾವುದೇ ಸೌಲಭ್ಯಗಳು ದೊರಕಿಲ್ಲ ಎಂದು ಕೆಪಿಸಿಸಿ ಸಾಮಾಜಿಕ ನ್ಯಾಯ ವಿಭಾಗದ ರಾಜ್ಯ ಉಪಾಧ್ಯಕ್ಷ ಬಿ.ಸಣ್ಣ ಮಾರೆಪ್ಪ ಆರೋಪಿಸಿದರು.

ಪಟ್ಟಣದ ಸುಡುಗಾಡು ಸಿದ್ಧ, ಸಿಂಧೋಳ್ಳು, ಹಕ್ಕಿಪಿಕ್ಕಿ ಸೇರಿ ಬುಡಕಟ್ಟು ಅಲೆಮಾರಿ, ಅರೆ ಅಲೆಮಾರಿ ಕಾಲನಿಗಳಿಗೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು. ಬಿಜೆಪಿ ಸರ್ಕಾರ ಅಲೆಮಾರಿಗಳನ್ನು ಸಂಪೂರ್ಣ ನಿರ್ಲಕ್ಷಿಸಿದೆ.

ಇದರಿಂದ ಅಲೆಮಾರಿಗಳು ಶಿಕ್ಷಣ, ಆರೋಗ್ಯ ಸೇರಿ ನಾನಾ ಮೂಲಸೌಕರ್ಯಗಳಿಂದ ವಂಚಿತರಾಗಿದ್ಧಾರೆ. 89 ಸಮುದಾಯಗಳಿಗೆ ಕೇವಲ ಶೇ.1 ಒಳ ಮೀಸಲಾತಿ ನೀಡಿ ಅನ್ಯಾಯ ಎಸಗಿದ್ದಾರೆ.

ಬಿಜೆಪಿ ದುರಾಡಳಿತದಿಂದ ಎಲ್ಲ ವರ್ಗದ ಜನ ಸಂಕಷ್ಟಪಡಬೇಕಿದೆ. ಬಿಜೆಪಿಯವರ ಬಣ್ಣದ ಮಾತು, ಸುಳ್ಳು ಭರವಸೆಗಳಿಗೆ ಅಲೆಮಾರಿಗಳು ಈಡಾಗಬಾರದು ಎಂದರು.

ಪ್ರಮುಖರಾದ ಸಿ.ಡಿ.ಗಿರೀಶ್, ಸಿ.ಡಿ.ರಾಜಶೇಖರ್, ಸೋಮಲಾಪುರ ಮಾರೇಶ್, ಚಂದಸಾಬ್, ಎಚ್.ಪಿ.ಶ್ರೀಕಾಂತ್, ಕರೇಕಲ್ ಮನೋಹರ್, ಸುರೇಶ್ ಗೊಂದಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net