More

    ಅಲೆಮಾರಿಗಳಿಗೆ ಶೇ.1 ಮೀಸಲು ಅವೈಜ್ಞಾನಿಕ  ಬುಡಕಟ್ಟು ಮಹಾಸಭಾ ಅಸಮಾಧಾನ 

    ದಾವಣಗೆರೆ: ರಾಜ್ಯ ಬಿಜೆಪಿ ಸರ್ಕಾರ ಒಳಮೀಸಲು ವರ್ಗೀಕರಣದಲ್ಲಿ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳಿಗೆ ಶೇ.1 ಮೀಸಲು ನೀಡಿರುವುದು ಅವೈಜ್ಞಾನಿಕವಾಗಿದೆ ಎಂದು ಎಸ್ಸಿ-ಎಸ್ಟಿ ಅಲೆಮಾರಿ ಬುಡಕಟ್ಟು ಮಹಾಸಭಾ ರಾಜ್ಯ ಕಾರ್ಯಾಧ್ಯಕ್ಷ ಸಣ್ಣ ಅಜ್ಜಯ್ಯ ಹೇಳಿದರು.
    ಸರ್ಕಾರ ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಒಳಮೀಸಲು ಜಾರಿಗೊಳಿಸಿದೆ. ಸರ್ಕಾರ ಪರಿಶಿಷ್ಟ ಜಾತಿಗೆ ಇದ್ದ ಶೇ.15 ಮೀಸಲಿನಲ್ಲಿ ಈವರೆಗೆ ಹೆಚ್ಚಿನ ಮಟ್ಟದಲ್ಲಿ ಮೀಸಲು ಪಡೆದಿದ್ದ ಸಮುದಾಯಗಳಿಗೇ ಆದ್ಯತೆ ನೀಡಿರುವುದು ಸರಿಯಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಸಮಾಜದ ಮುಖ್ಯವಾಹಿನಿಯಿಂದ ದೂರವಿರುವ, ಗುಡಿಸಲು, ಗುಡಾರಗಳಲ್ಲಿ ವಾಸಿಸುತ್ತಾ ಧಾರ್ಮಿಕ ಭಿಕ್ಷಾಟನೆ ಮೂಲಕ ಜೀವನ ಸಾಗಿಸುತ್ತಿರುವ ಅಲೆಮಾರಿ ಮತ್ತಿತರೆ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳು ಶಾಲೆಯ ಮುಖವನ್ನೇ ನೋಡದೆ ಕಡೆಗಣನೆಗೆ ಒಳಗಾಗಿವೆ. ಯಾವುದೇ ಸೌಲಭ್ಯ, ಸರ್ಕಾರಿ ನೌಕರಿ, ರಾಜಕೀಯ ಸ್ಥಾನಮಾನ ಪಡೆಯದೇ ಎಲ್ಲಾ ರಂಗಗಳಲ್ಲಿ ಹಿಂದುಳಿದಿರುವ 88 ಸಮುದಾಯಗಳಿಗೆ ಶೇ.1 ಮೀಸಲು ಮೂಗಿಗೆ ತುಪ್ಪ ಸವರಿದಂತಾಗಿದೆ ಎಂದರು.
    ರಾಜ್ಯ ಸರ್ಕಾರ ಕೇವಲ ಜನಸಂಖ್ಯೆ ಆಧಾರದ ಮೇಲೆ ಮೀಸಲು ವರ್ಗೀಕರಣ ಮಾಡದೆ ಇದುವರೆಗೂ ಯಾವ ಯಾವ ವರ್ಗಗಳು ಶೇ.15 ಮೀಸಲಾತಿ ಬಳಸಿಕೊಂಡು ಆರ್ಥಿಕ, ಶೈಕ್ಷಣಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಿವೆಯೋ ಅಂತಹ ಜಾತಿಗಳಿಗೆ ಸ್ವಲ್ಪ ಕಡಿಮೆ ಮೀಸಲು ನೀಡಬೇಕು.
    ಸೂಕ್ಷ್ಮ ಮತ್ತು ಮೀಸಲು ವಂಚಿತ ಅಲೆಮಾರಿ ಸಮುದಾಯದ 48 ಜಾತಿಗಳಿಗೆ ವರ್ಗ 5 ಎಂದು ಹೊಸದಾಗಿ ಸೇರ್ಪಡೆ ಮಾಡಿ ಈ ಸಮುದಾಯಕ್ಕೆ ಶೇ.3 ಮೀಸಲನ್ನು ನೀಡಿ ಸಮುದಾಯಗಳನ್ನು ಉಳಿಸಿ ಸಮಾಜದ ಮುಖ್ಯವಾಹಿನಿಗೆ ತಂದು ಸಾಮಾಜಿಕ ನ್ಯಾಯ ನೀಡಬೇಕು. ಒಂದು ವೇಳೆ ಶೇ.3 ಮೀಸಲು ನೀಡದಿದ್ದರೆ ಬರುವ ವಿಧಾನಸಭಾ ಚುನಾವಣೆಯಲ್ಲಿ 48 ಜಾತಿಗಳಿಂದ ಮತದಾನ ಬಹಿಷ್ಕಾರ ಮಾಡಲಾಗುವುದು ಎಂದು ಎಚ್ಚರಿಸಿದರು.
    ವೀರೇಶ್‌ಕುಮಾರ್, ದುರುಗಪ್ಪ, ಕಿರಣ್‌ಕುಮಾರ್, ಮಂಜುನಾಥ್, ಆಕಾಶ್ ಸುದ್ದಿಗೋಷ್ಠಿಯಲ್ಲಿದ್ದರು.
    —————–

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts