

ವಿಶೇಷ ವರದಿ
ತುಮಕೂರು: ರಾಜ್ಯ ಸಚಿವ ಸಂಪುಟದ ಪ್ರಭಾವಿ ಸಚಿವ ಕೆ.ಎನ್.ರಾಜಣ್ಣ ಬರೆದ ಪತ್ರಕ್ಕೇ ಸರ್ಕಾರ ಮಟ್ಟದಲ್ಲಿ ಕಿಮ್ಮತ್ತಿಲ್ಲ ! ಮಧುಗಿರಿ ಅಬಕಾರಿ ಡಿವೈಎಸ್ಪಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ 4 ತಿಂಗಳ ಹಿಂದೆಯೇ ಕೆಎನ್ನಾರ್ ಪತ್ರ ಬರೆದಿದ್ದರೂ ಈವರೆಗೆ ಕ್ರಮಕೈಗೊಳ್ಳಲು ಮೀನ&ಮೇಷ ಎಣಿಸಲಾಗುತ್ತಿದೆ.
ಮಧುಗಿರಿ ವಲಯದ ಅಬಕಾರಿ ಉಪಅಧೀಕ್ಷಕರ ಚಂದ್ರಪ್ಪ ಸತತ 3 ಕೆಡಿಪಿ ಸಭೆಗಳಿಗೆ ಗೈರಾಗಿದ್ದಲ್ಲದೆ, ತಾಲೂಕು ಮಟ್ಟದ ಯಾವುದೇ ಸಭೆ ಹಾಗೂ ಪ್ರಗತಿ ಪರಿಶೀಲನಾ ಸಭೆಗಳಿಗೆ ಹಾಜರಾಗದೆ ಕರ್ತವ್ಯಲೋಪ ಎಸಗಿದ್ದು ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಸಚಿವರಿಗೆ ಪತ್ರ ಬರೆದಿರುವ ಮಧುಗಿರಿ ಶಾಸಕರಾದ ಸಚಿವ ಕೆ.ಎನ್.ರಾಜಣ್ಣ ಅಮಾನತುಗೊಳಿಸುವಂತೆ ಒತ್ತಾಯಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕೆಡಿಪಿ ಸಭೆಯಲ್ಲೇ ರ್ನಿಣಯ: ಸತತ 3 ಕೆಡಿಪಿ ಸಭೆಗಳಿಗೆ ಗೈರಾದ ಚಂದ್ರಪ್ಪರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಸರ್ಕಾರಕ್ಕೆ ಶಿಾರಸು ಮಾಡಲು ತಾಲೂಕುಮಟ್ಟದ ಪ್ರಗತಿಪರಿಶೀಲನಾ ಸಭೆಯಲ್ಲೇ (ಕೆಡಿಪಿ ) ರ್ನಿಣಯವನ್ನು ಸಹ ತೆಗೆದುಕೊಳ್ಳಲಾಗಿತ್ತು. ಕೆಡಿಪಿ ಸಭೆ ರ್ನಿಣಯದಂತೆ ಚಂದ್ರಪ್ಪರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಖುದ್ದು ರಾಜಣ್ಣರೇ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರಗು ಪತ್ರ ಬರೆದಿದ್ದರು. ಈವರೆಗೆ ಸಣ್ಣಕ್ರಮವು ಆಗಿಲ್ಲ.
ಈ ಟನೆ ನಡೆದು 4 ತಿಂಗಳಾದರು ಚಂದ್ರಪ್ಪ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಕೆಎನ್ನಾರ್ ಖಡಕ್ ಎಚ್ಚರಿಕೆ, ಕೆಡಿಪಿ ರ್ನಿಣಯದ ಬಳಿಕವು ಯಾವುದಕ್ಕು ಜಗ್ಗದೆ ಉದ್ಧಟತನ ಪ್ರದರ್ಶಿಸುತ್ತಲೇ ಬಂದಿರುವ ಚಂದ್ರಪ್ಪ ಅಬಕಾರಿ ಇಲಾಖೆ ಅಧಿಕಾರಿಗಳಿಗೆ "ಬಿಸಿತುಪ್ಪ'ವಾಗಿ ಪರಿಣಮಿಸಿದ್ದಾರೆ. ಕೆಡಿಪಿ ಸಭೆಗೆ ಗೈರಾಗುವುದಲ್ಲದೆ, ಕಚೇರಿಗೆ ಬಾರದೆ ಒಂದೇ ದಿನ ಹಾಜರಾತಿ ಸಹ ಹಾಕುವ ಪರಿಪಾಠವನ್ನು ಚಂದ್ರಪ್ಪ ಬೆಳೆಸಿಕೊಂಡಿರುವುದುರಿಂದ ಸಹಜವಾಗಿ ಸಿಬ್ಬಂದಿ ಅಸಮಾಧಾನಕ್ಕೆ ಕಾರಣವಾಗಿದೆ. ಎಂಥ ಅಧಿಕಾರಿಗಳನ್ನು ಬಗ್ಗಿಸಬಲ್ಲ ಪ್ರಭಾವಿ ಸಚಿವ ರಾಜಣ್ಣ ಕೊನೆಗೆ ಈ ವಿಚಾರದಲ್ಲಿ ತಣ್ಣಗಾಗಿಬಿಟ್ಟಿದ್ದಾರೆ.
2 ವರ್ಷಗಳಿಂದ ಮಧುಗಿರಿ ವಲಯದಲ್ಲಿ ತಳವೂರಿರುವ ಅಬಕಾರಿ ಡಿವೈಎಸ್ಪಿ ಚಂದ್ರಪ್ಪ ನಿವೃತ್ತಿ ಅಂಚಿನಲ್ಲಿದ್ದು ಈ ವಿಚಾರದಲ್ಲಿ ಅಬಕಾರಿ ಇಲಾಖೆ ಹಿರಿಯ ಅಧಿಕಾರಿಗಳು ಮೌನವಹಿಸಲು ಕಾರಣ ಎನ್ನಲಾಗುತ್ತಿದೆ.
ಕೋಟ್...
ಸಚಿವ ರಾಜಣ್ಣರ ಪತ್ರ ಹಿನ್ನೆಲೆ ಅಬಕಾರಿ ಸಚಿವರು ಈ ಬಗ್ಗೆ ಕ್ರಮಕೈಗೊಳ್ಳಲು ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ವರದಿ ನೀಡಲು ತಮಗೆ ತಿಳಿಸಿದ್ದು ಡಿವೈಎಸ್ಪಿ ಚಂದ್ರಪ್ಪ ಕೆಡಿಪಿ ಸಭೆಯ ಯಾವುದೇ ನೋಟೀಸ್ ಬಂದಿಲ್ಲದ ಕಾರಣ ಸಭೆಗೆ ಹೋಗಿಲ್ಲವೆಂದು ಸಮಜಾಯಿಷಿ ಸಹ ನೀಡಿದ್ದಾರೆ. ಇನ್ನೂ ಇಲಾಖೆಯಲ್ಲಿ ಖಾಸಗಿ ವ್ಯಕ್ತಿಗಳನ್ನು ನೇಮಕ ಮಾಡಿಕೊಂಡಿರುವ ಬಗ್ಗೆ ದೂರುಗಳು ಬಂದಿದ್ದು ಸೂಪರಿಡಿಂಟ್ಗೆ ವರದಿ ನೀಡಲು ಸೂಚಿಸಿರುವೆ.
ವೈ. ಭರತೇಶ್
ಅಬಕಾರಿ ಉಪ ಆಯುಕ್ತ