

|ಜೇವರ್ಗಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಕೋರ್ ಕಮೀಟಿ ನೂತನ ಸದಸ್ಯರಾದ ನರಿಬೋಳ ಅವರಿಗೆ ಸನ್ಮಾನ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಳೆದ ಸಾಲಿನಲ್ಲಿ ನೆಟೆ ರೋಗದಿಂದ ಸಂಪೂರ್ಣ ತೊಗರಿ ಹಾಳಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ಸರ್ಕಾರ ಹಾನಿಗೊಳಗಾದ ರೈತರಿಗೆ ಸಮರ್ಪಕ ಪರಿಹಾರ ನೀಡುವಲ್ಲಿ ವಿಫಲವಾಗಿದೆ ಎಂದು ಮಾಜಿ ಶಾಸಕರಾಗಿರುವ ಜೆಡಿಎಸ್ ನಾಯಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಆರೋಪಿಸಿದರು.
ಜೇವರ್ಗಿ ಪಟ್ಟಣದ, ಜೆಡಿಎಸ್ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನೆಟೆಯಿಂದ ಬೆಳೆ ಕಳೆದುಕೊಂಡ ರೈತರಿಗೆ ಶೀಘ್ರ ಪರಿಹಾರ ನೀಡಬೇಕು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿಯೇ ಕೆಲಸ ಮಾಡುತ್ತಿದ್ದೇನೆ.. ಜೆಡಿಎಸ್ ಪಾರ್ಟಿಯಲ್ಲಿ ಉನ್ನತ ಹುದ್ದೆ ನೀಡಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಪ್ರಮುಖರಾದ ಸಿದ್ದಣ್ಣಗೌಡ ಬಿರಾದಾರ, ಧರ್ಮರಾಜ ಜೋಗೂರ, ಸಿದ್ದಯ್ಯಸ್ವಾಮಿ ಗದಗಿಮಠ, ಶಂಕರರಾವ್ ಕುಲಕರ್ಣಿ, ಪ್ರೇಮನಗೌಡ ಮಾಲಿಪಾಟೀಲ್, ದೇವಿಂದ್ರ, ದುಂಡಪ್ಪ ನಾಯ್ಕೋಡಿ, ದವಲ್‌ಸಾಬ್ ಮುಲ್ಲಾ, ಮಹಿಬೂಬ್ ಗೊಬ್ಬರವಾಡಗಿ, ಶಿವಕುಮಾರ ಅಂಗಡಿ, ಶರಣಗೌಡ ಬಿರಾದಾರ, ರಾಘವೇಂದ್ರ ಕುಲಕರ್ಣಿ, ಮಹಾಂತಗೌಡ ಪಾಟೀಲ್ ನಂದಿಹಳ್ಳಿ, ಸಂಗನಗೌಡ ಪಾಟೀಲ್ ನಂದಿಹಳ್ಳಿ ಇತರರಿದ್ದರು.