ಎರಡು ತಿಂಗಳಾದ್ರೂ ಫಲಿತಾಂಶವಿಲ್ಲ; ಬೆಂ. ನಗರ ವಿವಿ ಎಡವಟ್ಟಿಗೆ ವಿದ್ಯಾರ್ಥಿಗಳ ಆಕ್ರೋಶ

BCU
Published on

ಬೆಂಗಳೂರು: ಸ್ನಾತಕೋತ್ತರ ಪದವಿ ಕೋರ್ಸ್ ಮುಗಿಸಿ ವಿದ್ಯಾರ್ಥಿಗಳು ಕಾಲೇಜಿನಿಂದ ಹೊರಗೆ ಹೋಗಿ ಎರಡು ತಿಂಗಳಾಗಿದೆ. ಈವರೆಗೂ ಬೆಂಗಳೂರು ನಗರ ವಿಶ್ವವಿದ್ಯಾಲಯವು ಪದವಿಯ ಯಾವುದೇ ಸೆಮಿಸ್ಟರ್ ಅಂಕಪಟ್ಟಿ ನೀಡದಿರುವುದು ಮತ್ತು ನಾಲ್ಕನೇ ಸೆಮಿಸ್ಟರ್ ಫಲಿತಾಂಶ ಪ್ರಕಟಿಸದ ಪರಿಣಾಮ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.

2022-23 0 2023-24歳 ಸಾಲಿನಲ್ಲಿ వివియల్లి ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಂದ ಪ್ರತಿ ಸೆಮಿರ್ಸ್ಟ ಅಂಕಪಟ್ಟಿ ಶುಲ್ಕವಾಗಿ ತಲಾ 150 ರೂ. ಗಳನ್ನು ಸಂಗ್ರಹಿಸಲಾಗಿದೆ. ಆದರೆ, ಇಡೀ ಕೋರ್ಸ್ ಮುಗಿದರೂ ಈವರೆಗೆ ಅಂಕಪಟ್ಟಿಗಳು ಮಾತ್ರ ವಿದ್ಯಾರ್ಥಿಗಳ ಕೈಸೇರಿಲ್ಲ ಎಂದು ತಿಳಿದುಬಂದಿದೆ.

ರಾಷ್ಟ್ರೀಯ ಶಿಕ್ಷಣ ನೀತಿ (ಎನ್ ಇಪಿ) ಪ್ರಕಾರ, ವಿದ್ಯಾರ್ಥಿಗಳಿಗೆ ಭೌತಿಕವಾಗಿ (ಹಾರ್ಡ್ ಕಾಪಿ) ಅಂಕಪಟ್ಟಿಗಳನ್ನು ವಿತರಣೆ ಮಾಡುವುದಿಲ್ಲ. ಅಂಕಪಟ್ಟಿಗಳನ್ನು ಆನ್‌ಲೈನ್ ಮೂಲಕ ಡೌನ್‌ ಲೊಡ್ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ರಾಷ್ಟ್ರೀಯ ಶೈಕ್ಷಣಿಕ ಠೇವಣಿ (ಎನ್‌ಡಿ) ಸಹಯೋಗದಲ್ಲಿ ಡಿಜಿಲಾಕರ್ ನಲ್ಲಿ ವಿದ್ಯಾರ್ಥಿಗಳು ಅಂಕಪಟ್ಟಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಸೌಲಭ್ಯ ಕಲ್ಪಿಸಲಾಗಿದೆ. ದುರಾದೃಷ್ಟವಸಾತ್, ಆನ್‌ಲೈನ್ ಮೂಲಕವೂ ಅಂಕಪಟ್ಟಿಗಳು ದೊರೆಯುತ್ತಿಲ್ಲ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವುದಾದರೆ, ವಿದ್ಯಾರ್ಥಿಗಳಿಂದ 150 ರೂ. ಶುಲ್ಕ ಸಂಗ್ರಹ ಏಕೆ ಮಾಡಬೇಕಿತ್ತು? ಶುಲ್ಕ ಸಂಗ್ರಹಿಸಿದ ನಂತರ ಪ್ರತಿ ಸೆಮಿಸ್ಟರ್ ಫಲಿತಾಂಶ ಪ್ರಕಟವಾದ ಬಳಿಕ ಅಂಕಪಟ್ಟಿ ವಿತರಣೆ ಮಾಡಬೇಕಿತ್ತು. ಕೊನೇ ಪಕ್ಷ ಡಿಜಿ ಲಾಕರ್‌ನಲ್ಲಿಯಾದರೂ ಅಪ್‌ ಲೋಡ್ ಮಾಡಬೇಕಿತ್ತು. ಯಾವ ರೂಪದಲ್ಲೂ ಅಂಕಪಟ್ಟಿ ಸಿಗುತ್ತಿಲ್ಲ ಎಂಬುದು ವಿದ್ಯಾರ್ಥಿಗಳ ಅಳಲಾಗಿದೆ. ಇನ್ನು ಸ್ನಾತಕೋತ್ತರ ಪದವಿ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಗಳು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಮುಕ್ತಾಯವಾಗಿವೆ. ಪರೀಕ್ಷೆ ಮುಗಿದು ಎರಡೂವರೆ ತಿಂಗಳಾದರೂ ಫಲಿತಾಂಶ ನೀಡಿಲ್ಲ. ಸ್ನಾತಕೋತ್ತರ ಪದವಿ ಪೂರ್ಣಗೊಂಡಿರುವ ವಿದ್ಯಾರ್ಥಿಗಳು ಉದ್ಯೋಗ ಸೇರಿ ಹಲವು ಕಾರಣಗಳಿಗೆ ಫಲಿತಾಂತ ಮುಖ್ಯವಾಗಲಿದೆ. ಹಲವು ಬಾರಿ ಫಲಿತಾಂಶ ಕೇಳಿದರೂ ಪ್ರಕಟಿಸಿಲ್ಲ. ಅನಗತ್ಯವಾಗಿ ៩ విళంబ ಮಾಡುತ್ತಿದೆ ಎಂದು ತಿಳಿಯುತ್ತಿಲ್ಲವೆಂದು ತಿಳಿಸಿದ್ದಾರೆ.

ಯುಯುಸಿಎಂಎಸ್ ಸಮಸ್ಯೆ ಎಂದ ವಿವಿ

ವಿವಿಯಿಂದ ಯಾವುದೇ ಸೆಮಿಸ್ಟ‌ರ್ನ ಅಂಕಪಟ್ಟಿಗಳನ್ನು ವಿತರಣೆ ಮಾಡಿಲ್ಲ. ಆದರೆ, ಆನ್ ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾದರಿಯಲ್ಲಿ ಅಂಕಪಟ್ಟಿಗಳನ್ನು ಅಪ್ ಲೋಡ್ ಮಾಡಲಾಗಿದೆ. ತಾಂತ್ರಿಕ ಸಮಸ್ಯೆಯಾಗಿ ಅಂಕಪಟ್ಟಿಗಳು ವಿದ್ಯಾರ್ಥಿಗಳ ಕೈ ಸೇರದಿರಬಹುದು ಎಂದು ವಿಶ್ವವಿದ್ಯಾಲಯ ಆಡಳಿತವು ಒಪ್ಪಿಕೊಂಡಿದೆ.

ಅಂಕಪಟ್ಟಿಗಳನ್ನು ಮುದ್ರಣಕ್ಕೆ ಕಳುಹಿಸಲಾಗಿದೆ. ಮುಂದಿನ 15 ದಿನಗಳಲ್ಲಿ ವಿತರಣೆ ಮಾಡಲಾಗುತ್ತದೆ. ಹಾಗೆಯೇ ವಿದ್ಯಾರ್ಥಿ ಗಳಿಗೆ ಅನ್ಯಾಯವಾಗಬಾರದು ಎಂಬ ಕಾರಣದಿಂದ ನಾಲ್ಕನೇ ಸೆಮಿಸ್ಟರ್ ಉತ್ತರ ಪತ್ರಿಕೆಗಳನ್ನು ಎರಡೆರಡು ಬಾರಿ ಮೌಲ್ಯಮಾಪನ ಮಾಡಿಸಲಾಗುತ್ತಿದೆ. ಸದ್ಯದಲ್ಲಿಯೇ ಫಲಿತಾಂಶ ಕೂಡ ಪ್ರಕಟಿಸಲಾಗುತ್ತದೆ.

| ಡಾ. ಸಿ.ಎಸ್. ಆನಂದಕುಮಾರ್ ಬೆಂ.ನಗರ ವಿವಿ ಮೌಲ್ಯಮಾಪನ ಕುಲಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net