24ರಂದು ಕಾಪು-ಶಿರ್ವ-ಮುದರಂಗಡಿಯಲ್ಲಿ ಕರೆಂಟ್ ಇರಲ್ಲ

electricity grid
Published on

ಉಡುಪಿ: 24ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5.30ರ ವರೆಗೆ 33/11ಕೆವಿ ಶಿರ್ವ ಎಂ.ಯು.ಎಸ್.ಎಸ್ ನಿಂದ ಹೊರಡುವ 11ಕೆವಿ ಮುದರಂಗಡಿ ಫೀಡರಿನಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ, 11ಕೆವಿ ಮುದರಂಗಡಿ ಫೀಡರ್ ಬಂಟಕಲ್ಲು, ಪಡುಬೆಳ್ಳೆ, ಶಿರ್ವ, ಪಂಜಿಮಾರು, ಚೆಕ್ ಪಾದೆ, ಕಾಪು, ಇಂದ್ರಪುರ, ಬಂಗ್ಲೆಗುಡ್ಡೆ, ಕುತ್ಯಾರು, ಕಾಪು ರೋಡ್, ಕಳತ್ತೂರು, ತೆಂಕರಪಲ್ಕೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net