ಪೇಜಾವರ ಶ್ರೀಗಳನ್ನು ಹೊತ್ತು ಕುಣಿದ ಶಿಷ್ಯರು

pejavar viral
Published on

ಉಡುಪಿ: ತೀರ್ಥ ಕ್ಷೇತ್ರದ ಟ್ರಸ್ಟಿಯೂ ಆದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಕಾರಿನಲ್ಲಿ ಅಯೋಧ್ಯೆಗೆ ಬಂದಿಳಿದಾಗ ಮಠದ ಶಿಷ್ಯರು ಹಾಗೂ ಸೇರಿದ್ದ ಸ್ಥಳೀಯ ನೂರಾರು ರಾಮಭಕ್ತರು, ಅವರ ಮೇಲೆ ಹೂವಿನ ಸುರಿಮಳೆಗೈದರು.
ಒಂದೆರಡು ನಿಮಿಷ ಹೂವನ್ನು ಸುರಿಯುತ್ತಿದ್ದ ಭಕ್ತರು, ಬಳಿಕ ಶ್ರೀಪಾದರನ್ನು ಹೊತ್ತು ಮಠದ ಒಳಗೆ ಸಾಗಿದರು. ಶ್ರೀಗಳನ್ನು ಹೊತ್ತುಕೊಂಡಿದ್ದೇವೆ ಎಂಬ ಅರಿವೂ ಇಲ್ಲದೆ, ಎಲ್ಲರೂ ಕುಣಿಯುತ್ತಿದ್ದರು. ಒಂದು ರೀತಿಯಲ್ಲಿ ಭಾವುಕರಾದಂತೆ ಕಂಡುಬಂದ ಪೇಜಾವರ ಶ್ರೀಗಳು ಪ್ರತಿರೋಧ ವ್ಯಕ್ತಪಡಿಸದೆ, ‘ರಾಮಸಂಭ್ರಮ’ವನ್ನು ಸವಿದರು. ಐದಾರು ನಿಮಿಷಗಳ ಕಾಲ ಅವರನ್ನು ಹೊತ್ತು ಕುಣಿಯುತ್ತಿದ್ದ ಜನರು, ಶ್ರೀರಾಮನಿಗೆ ಜಯೋಷ ಮೊಳಗಿಸುತ್ತಿದ್ದರು. ಶ್ರೀಗಳನ್ನು ಹೊತ್ತು ಕುಣಿದ ದೃಶ್ಯವೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net