

ತುಮಕೂರು: ರಾಜಕೀಯ ಪ್ರಶ್ನೆಗಳಿಗೆ ನಾನು ಉತ್ತರಿಸುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಖಡಕ್ ಆಗಿ ಹೇಳಿದರು.
ಸಿಎಂ ಬದಲಾವಣೆ ಕುರಿತ ಚರ್ಚೆಹುಟ್ಟು ಹಾಕಿದ್ದು ಯಾರು, ಹೇಗೆ ಶುರುವಾಯ್ತು ಎಂಬ ಪತ್ರಕರ್ತರ ಪ್ರಶ್ನೆಗೆ, ನೋ ಪೊಲಿಟಿಕಲ್ ಕ್ವೆಶ್ಚನ್. ಇಂತಹ ಪ್ರಶ್ನೆಗಳನ್ನು ನಾನು ತೆಗೆದುಕೊಳ್ಳುವುದಿಲ್ಲ. ನನಗೆ ಗೊತ್ತಿಲ್ಲ, ರಾಜಕೀಯ ಮಾತನಾಡಲ್ಲ ಎಂದು ಶುಕ್ರವಾರ ಸಂಜೆ ತೀಕ್ಷ್ಣ ವಾಗಿ ಪ್ರತಿಕ್ರಿಯಿಸಿದರು.
ರಾತ್ರಿ ವೇಳೆ ರಸ್ತೆಯಲ್ಲಿ ಯುವಕರ ಬೈಕ್ ವೀಲಿಂಗ್, ಪುಂಡಾಟಿಕೆ ಯನ್ನು ಪೊಲೀಸ್ ಇಲಾಖೆಯಲ್ಲಿ ಇದನ್ನ ಗಂಭೀರವಾಗಿ ಪರಿಗಣಿಸಿದೆ. ವಿಲೀಂಗ್ ಮಾಡುವವರ ವಿರುದ್ದ ಕಠಿಣವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.