ಕೋಚಿಮುಲ್ ವಿಭಜನೆಗೆ ಅಭ್ಯಂತರವಿಲ್ಲ

ಚಿಂತಾಮಣಿ ತಾಲೂಕಿನ ದೊಡ್ಡಬೊಮ್ಮನಹಳ್ಳಿ ಡೇರಿಯ ನೂತನ ಕಟ್ಟಡವನ್ನು ಸಚಿವ ಡಾ.ಎಂ.ಸಿ.ಸುಧಾಕರ್ ಉದ್ಘಾಟಿಸಿದರು. ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ, ಎಂಎಲ್‌ಸಿ ಅನಿಲ್ ಕುಮಾರ್, ಡೇರಿ ಅಧ್ಯಕ್ಷ ಕೆ.ವೆಂಕಟೇಶ್ ಗೌಡ, ಕೋಚಿಮುಲ್ ನಿರ್ದೇಶಕ ಅಶ್ವತ್ಥ್‌ನಾರಾಯಣ ಬಾಬು, ಚಿಂತಾಮಣಿ ಶಿಬಿರ ಕಚೇರಿ ಉಪವ್ಯವಸ್ಥಾಪಕ ಡಾ.ಮಹೇಶ್.ಡಿ.ಎಂ, ವಿಸ್ತರಣಾಧಿಕಾರಿ ಸಂತೋಷ್ ಕುಮಾರ್, ಚಿಂತಾಮಣಿ ತಾಲೂಕು ಹಾಲು ಉತ್ಪಾದಕರ ಸಹಕಾರ ನೌಕರರ ಸಂಘದ ಅಧ್ಯಕ್ಷ ಬಿ.ಕೆಂಪರೆಡ್ಡಿ ಮತ್ತಿತರರು ಇದ್ದರು.
23cmy1
ಚಿಂತಾಮಣಿ ತಾಲೂಕಿನ ದೊಡ್ಡಬೊಮ್ಮನಹಳ್ಳಿ ಡೇರಿಯ ನೂತನ ಕಟ್ಟಡವನ್ನು ಸಚಿವ ಡಾ.ಎಂ.ಸಿ.ಸುಧಾಕರ್ ಉದ್ಘಾಟಿಸಿದರು. ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ, ಎಂಎಲ್‌ಸಿ ಅನಿಲ್ ಕುಮಾರ್, ಡೇರಿ ಅಧ್ಯಕ್ಷ ಕೆ.ವೆಂಕಟೇಶ್ ಗೌಡ, ಕೋಚಿಮುಲ್ ನಿರ್ದೇಶಕ ಅಶ್ವತ್ಥ್‌ನಾರಾಯಣ ಬಾಬು, ಚಿಂತಾಮಣಿ ಶಿಬಿರ ಕಚೇರಿ ಉಪವ್ಯವಸ್ಥಾಪಕ ಡಾ.ಮಹೇಶ್.ಡಿ.ಎಂ, ವಿಸ್ತರಣಾಧಿಕಾರಿ ಸಂತೋಷ್ ಕುಮಾರ್, ಚಿಂತಾಮಣಿ ತಾಲೂಕು ಹಾಲು ಉತ್ಪಾದಕರ ಸಹಕಾರ ನೌಕರರ ಸಂಘದ ಅಧ್ಯಕ್ಷ ಬಿ.ಕೆಂಪರೆಡ್ಡಿ ಮತ್ತಿತರರು ಇದ್ದರು.
Published on


ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿಕೆ


ವಿಜಯವಾಣಿ ಸುದ್ದಿಜಾಲ ಚಿಂತಾಮಣಿ
ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ಒಂದೂವರೆ ದಶಕ ಕಳೆದಿದ್ದು, ಈಗ ಕೋಚಿಮುಲ್ ವಿಭಜನೆಗೆ ಯಾವುದೇ ಅಭ್ಯಂತರವಿಲ್ಲ. ಆದರೆ ಒಕ್ಕೂಟ ಉಳಿಯ ಬೇಕಾದರೆ ವೈಜ್ಞಾನಿಕ ಹಾಗೂ ವ್ಯವಸ್ಥಿತವಾಗಿ ವಿಭಜನೆಯಾಗಬೇಕು ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ತಾಲೂಕಿನ ಕಸಬಾ ಹೋಬಳಿಯ ದೊಡ್ಡಬೊಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ, ಬಿಎಂಸಿ ಘಟಕ ಹಾಗೂ ಸಾಮೂಹಿಕ ಹಾಲು ಕರೆಯುವ ಘಟಕ ಉದ್ಘಾಟಿಸಿ ಮಾತನಾಡಿ, ಕಳೆದ ಸರ್ಕಾರ ಕೋಚಿಮುಲ್ ಅನ್ನು ತರಾತುರಿಯಲ್ಲಿ ವಿಭಜನೆ ಮಾಡುವ ಚಿಂತನೆ ನಡೆಸಿತ್ತು. ಇದರಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ನಿರ್ದೇಶಕರು ಅಸ್ತಿತ್ವ ಕಳೆದುಕೊಂಡಿದ್ದರು. ವಿಭಜನೆ ಸಂಬಂಧಿಸಿದ ಚರ್ಚೆಗಳಲ್ಲಿ ನಮ್ಮ ಸದಸ್ಯರು ಭಾಗವಹಿಸಿರಲಿಲ್ಲ. ಆದ್ದರಿಂದ ಪ್ರಕರಣ ನ್ಯಾಯಾಲಯ ಮೆಟ್ಟಿಲು ಏರಬೇಕಾಯಿತು. ಎರಡು ಜಿಲ್ಲೆಗಳು ಒಗ್ಗಟ್ಟಿನಿಂದ ಹಣ ಶೇಖರಿಸಿ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ವಿಭಜನೆ ಮಾಡಬೇಕು ಎಂದರು.
ಡೇರಿ ಚುನಾವಣೆಯ ದುಂದು ವೆಚ್ಚಕ್ಕೆ ಕಡಿವಾಣ ಹಾಕುವುದು, ಷೇರುದಾರರು ಬಿಟ್ಟು ಹಾಲು ಹಾಕುವವರು ಮಾತ್ರ ಮತದಾನ ಮಾಡಬೇಕು. ಪಕ್ಷಭೇದ ಬಿಟ್ಟು ಡೇರಿ ಅಭಿವೃದ್ಧಿಗೆ ಸಹಕರಿಸುವಂತೆ ಸದಸ್ಯರಲ್ಲಿ ಕೋರಿದ ಸಚಿವರು, ಸರ್ಕಾರದಲ್ಲಿ ಸಾಕಷ್ಟು ಬದಲಾವಣೆಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ರಸ್ತೆ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ. ತಾಲೂಕಿನಲ್ಲಿ ಅಪಘಾತ ತಿರುವುಗಳಲ್ಲಿ ಸುರಕ್ಷತೆಗೆ ಕ್ರಮವಹಿಸಲಾಗುತ್ತಿದೆ ಎಂದರು.
14 ಸಾವಿರ ಎಕರೆ ಜಮೀನನ್ನು ಹಿಂದಿನ ಬಿಜೆಪಿ ಸರ್ಕಾರ ಡೀಮ್ಸ್ ಾರೆಸ್ಟ್‌ನ ಹೆಸರಲ್ಲಿ ನೋಂದಣಿ ಮಾಡಿದೆ. ಅದನ್ನು ಬಿಡಿಸುವ ಕೆಲಸ ಸರ್ಕಾರದಲ್ಲಿ ಮಾಡಲಾಗುತ್ತಿದೆ ಎಂದು ಹಲವು ಅಭಿವೃದ್ಧಿ ವಿಷಯಗಳ ಬಗ್ಗೆ ಸಚಿವರು ಸಭೆಯಲ್ಲಿ ಮಾಹಿತಿ ನೀಡಿದರು.
ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಮದನಹಳ್ಳಿಯಲ್ಲಿ ನಾನು ಹಾಲಿನ ಡೇರಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಕಾರ್ಯದರ್ಶಿ ಚಾಲಾಕಿ ಇ್ಲದಿದ್ದರೆ ನಿರ್ದೇಶಕರು ಚಳ್ಳೆ ಹಣ್ಣು ತಿನಿಸುವುದು ಗ್ಯಾರಂಟಿ. ಹಾಗಾಗಿ ಎಲ್ಲರೂ ಡೇರಿ ಅಭಿವೃದ್ಧಿ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸಬೇಕು ಎಂದರು.


ಅಪ್ಪ ಗೆದ್ದಿದ್ದರೆ ಚಿಂತಾಮಣಿಯಲ್ಲೇ
ಕೋಚಿಮುಲ್ ಸ್ಥಾಪನೆ ಆಗ್ತಿತ್ತು!

ಅವಿಭಜಿತ (((ಕೋಲಾರದ ))))ಚಿಂತಾಮಣಿಯಲ್ಲಿ ಮೊಟ್ಟಮೊದಲ ಬಾರಿಗೆ ಹಾಲು ಶೇಖರಣಾ ಘಟಕ ಸ್ಥಾಪನೆಯಾಗಿತ್ತು. 1985ರಲ್ಲಿ ನಮ್ಮ ತಂದೆ ಚೌಡರೆಡ್ಡಿ ಅವರು ಚುನಾವಣೆಯಲ್ಲಿ ಪರಾಭವಗೊಳ್ಳದೆ ಇದ್ದಿದ್ದರೆ ಚಿಂತಾಮಣಿಯಲ್ಲೇ ಕೋಚಿಮುಲ್ ಸ್ಥಾಪನೆಯಾಗುತ್ತಿತ್ತು. ತಂದೆ ಸೋತ ಬಳಿಕ ಐಎಎಸ್ ಅಧಿಕಾರಿ ಸಿ.ಮುನಿಸ್ವಾಮಿ ಅವರು ಕೋಲಾರದಲ್ಲಿನ ಅವರ ಊರಿಗೆ ಸಮೀಪದಲ್ಲಿ ಸ್ಥಾಪಿಸಿದರು ಎಂದು ನೆನಪಿಸಿಕೊಂಡ ಸಚಿವ ಸುಧಾಕರ್, ಸಹಕಾರಿ ಸಂಘದ ಡೇರಿಗಳ ಬದಲು ಈಗಲೂ ಖಾಸಗಿ ಡೇರಿಗಳಲ್ಲಿ ಹಾಲು ಶೇಖರಣೆ ಮಾಡುತ್ತಿರುವುದಕ್ಕೆ ಬೇಸರಿಸಿದರು.
ರೈತರ ಪ್ರೋತ್ಸಾಹ ಧನ 6 ತಿಂಗಳಿಂದ ಬಾಕಿ ಇದೆ. ಹಿಂದಿನ ಬಿಜೆಪಿ ಸರ್ಕಾರದ ಬಾಕಿ ಹೊರೆ ನಮ್ಮ ಮೇಲೆ ಬಿದ್ದಿದ್ದು, ಸಮಸ್ಯೆಗೆ ಶೀಘ್ರವೇ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.

ಚಿಂತಾಮಣಿಗೆ ಅತೀ ಹೆಚ್ಚು ಅನುದಾನ
ಕೋಚಿಮುಲ್ ಅಧ್ಯಕ್ಷರೂ ಆದ ಮಾಲೂಕು ಶಾಸಕ ಕೆ.ವೈ.ನಂಜೇಗೌಡರು ಮಾತನಾಡಿ, ಚಿಂತಾಮಣಿಗೆ ಅತೀ ಹೆಚ್ಚಿನ ಅನುದಾನ ನೀಡಲಾಗಿದೆ. ದೊಡಬೊಮ್ಮನಹಳ್ಳಿ ಡೇರಿ ಕಟ್ಟಡಕ್ಕೆ 3 ಲಕ್ಷ ರೂ. ಬಿಎಂಸಿ ಕೇಂದ್ರಕ್ಕೆ ಲಕ್ಷ ಲೀ.ಹಾಲು ಕರೆಯುವ ಯಂತ್ರಗಳಿಗೆ 50 ಲಕ್ಷ ರೂ. ಅನುದಾನವನ್ನು ಕೊಚಿಮುಲ್‌ನಿಂದ ನೀಡಲಾಗಿದೆ. ಚಿಂತಾಮಣಿಯಲ್ಲಿ ಐಸ್ ಕ್ರೀಮ್ ್ಯಾಕ್ಟರಿ ಸಹ ಸ್ಥಾಪನೆಯಾಗಲಿದ್ದು, 350 ಕೋಟಿ ರೂ.ಗಳಲ್ಲಿ ನಾಲ್ಕು ಪ್ರಾಜೆಕ್ಟ್‌ಗಳು ಕೈಗೆತ್ತಿಕೊಂಡಿದ್ದು, ಕಾಂಗ್ರೆಸ್ ಸರ್ಕಾರದ ಸಹಕಾರದಿಂದ ರೈತರಿಗೆ ಅನುಕೂಲವಾಗಲಿದೆ. ಸೋಲಾರ್ ಘಟಕ ನಿರ್ಮಾಣದಿಂದ 2 ಕೋಟಿ ರೂ.ಹಣ ಉಳಿತಾಯವಾಗಲಿದೆ. ಇದರ ಜತೆಗೆ ರಾಸುಗಳಿಗೆ ವಿಮೆ ಸೌಲಭ್ಯ ಕಲ್ಪಿಸಲಾಗಿದ್ದು, ಹೈನುಗಾರರು ಸದ್ಬಳಸಿಕೊಳ್ಳಬೇಕು. ಜಿಲ್ಲೆಗಳಲ್ಲಿ ನೀರಿನ ಅಭಾವವಿದ್ದರೂ ರೈತರ ಸ್ವಾವಲಂಬಿ ಬದುಕಿಗೆ, ಆರ್ಥಿಕ ಅಭಿವೃದ್ಧಿಗೆ ಹೈನುಗಾರಿಕೆಗೆ ಸಹಕಾರಿಯಾಗಿದ್ದು, ಬಿಎಂಸಿಗಳಿಂದ ಹಾಲಿನ ಗುಣಮಟ್ಟವೂ ಹೆಚ್ಚಾಗಿರುವುದು ಉತ್ತಮ ಬೆಳವಣಿಗೆ ಎಂದು ಶಾಸಕ ನಂಜೇಗೌಡ ಹೇಳಿದರು.

ಡೇರಿ ಉಪಾಧ್ಯಕ್ಷ ವೀರಭದ್ರಪ್ಪ, ನಿರ್ದೇಶಕ ಎಮ್.ಶಿವಾರೆಡ್ಡಿ, ನಾರಾಯಣಸ್ವಾಮಿ, ವೆಂಕಟಾಚಲಗೌಡ, ನವೀನ್ ಕುಮಾರ್, ವೆಂಕಟೇಶಪ್ಪ, ಕೃಷ್ಣಪ್ಪ, ರವಿಶಂಕರ್, ಮಹೇಶ್, ಸುಜಾತಮ್ಮ, ಅಂಜಮ್ಮ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಿ.ನಾಗರಾಜ್, ಹಾಲು ಪರೀಕ್ಷಕ ಬಿ.ವಿ.ಆಂಜನೇಯಮೂರ್ತಿ, ಗುಮಾಸ್ತ ಎನ್.ರಾಘವೇಂದ್ರರಾವ್, ಸಹಾಯಕ ಎನ್.ಸೋಮಣ್ಣ, ಜಿ.ಮಾಧವ, ನರೇಂದ್ರ ಗೌಡ, ಆನೂರ್ ಸುಬ್ಬಣ್ಣ, ಸೀಕಲ್ ರಮಣಾರೆಡ್ಡಿ, ನಂಜುಂಡಗೌಡ, ರವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net