ಸಂಪುಟದಿಂದ ಕೈ ಬಿಡುವ ಕುರಿತು ಸೂಚನೆ ಬಂದಿಲ್ಲ

prabhu chouhan
Published on

ಹಾವೇರಿ: ಸಂಪುಟದಿಂದ ಕೈ ಬಿಡುವ ಕುರಿತು ಪಕ್ಷದಿಂದ ಯಾವುದೇ ಸೂಚನೆ ಬಂದಿಲ್ಲ. ಸಚಿವನಾಗಿ ಗೋಮಾತೆ ಸೇವೆ ಮಾಡುತ್ತಿದ್ದೇನೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಸ್ಪಷ್ಟಪಡಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಭು ಚವ್ಹಾಣ ಅವರನ್ನು ಸಂಪುಟದಿಂದ ಕೈ ಬಿಡ್ತಾರೆ ಎಂದು ಮಾಧ್ಯಮದವರು ಅಂತಿದ್ದಾರೆ. ಹೈಕಮಾಂಡ್, ಸಿಎಂ, ಕೋರ್ ಕಮಿಟಿ ತೆಗೆದುಕೊಳ್ಳುವ ತೀರ್ವನವೇ ಅಂತಿಮ’ ಎಂದರು.

‘ಬಹುದೊಡ್ಡ ಪಕ್ಷವಾಗಿರುವ ಬಿಜೆಪಿಯಲ್ಲಿ ಲಾಬಿಯೂ ದೊಡ್ಡದಾಗಿಯೇ ಇರುತ್ತದೆ. ನಾನು ಬಿಜೆಪಿಯ ಶಿಸ್ತಿನ ಸಿಪಾಯಿ. ವರಿಷ್ಠರು ಹೇಳಿದ್ದನ್ನು ನಾವು ಪಾಲಿಸಬೇಕು. ನಮ್ಮ ಪಕ್ಷದ ಕಡೆಯಿಂದ ನನಗೆ ಯಾವುದೇ ಸೂಚನೆ ಬಂದಿಲ್ಲ. ನನ್ನ ಕೆಲಸಕ್ಕೆ ಸಿಎಂ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದರು.

‘ಗಡಿಯಲ್ಲಿ ಬೆಂಕಿ ಹಾಕೋ ಕೆಲಸವನ್ನು ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಮಾಡುತ್ತಿದ್ದಾರೆ. ನಮ್ಮ ಒಂಚೂರು ಭೂಮಿಯನ್ನು ಅವರಿಗೆ ಕೊಡಲ್ಲ. ಕರ್ನಾಟಕ ಆರು ಕೋಟಿ ಕನ್ನಡಿಗರ ಸಂಪತ್ತು. ಪವಾರ್​ಗೆ ಏನೂ ಕೆಲಸವಿಲ್ಲ. ಬರೀ ಬೆಂಕಿ ಹಾಕುವ ಕೆಲಸ ಮಾಡುತ್ತಾರೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ನಾನೂ ಮನವಿ ಮಾಡಿದ್ದೆ. ಅದೇ ರೀತಿ ವೀರಶೈವ-ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರವನ್ನೂ ರಚಿಸುತ್ತಿದ್ದಾರೆ. ಜನರ ಅಭಿವೃದ್ಧಿಗಾಗಿ ಏನೇನು ಬೇಕೋ ಅದನ್ನು ನಮ್ಮ ಸಿಎಂ ಮಾಡುತ್ತಿದ್ದಾರೆ’ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net