ನನಗೆ ಪ್ರಚಾರ ಬೇಕಿಲ್ಲ, ಅವಶ್ಯಕತೆಯೂ ಇಲ್ಲ: ಮಾಧ್ಯಮದವರ ವಿರುದ್ಧ ಸಿದ್ದರಾಮಯ್ಯ ಕಿಡಿ

Siddu
Published on

ಬಾಗಲಕೋಟೆ: ನನಗೆ ಪ್ರಚಾರದ ಅವಶ್ಯಕತೆ ಇಲ್ಲ, ಸುದ್ದಿ ಬೇಕೆಂದರೆ ನೀವು ಕಾಯಲೇಬೇಕು ಎಂದು ಮಾಧ್ಯಮಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲಘುವಾಗಿ ಹೇಳಿಕೆ ನೀಡಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಮಾಧ್ಯಮದವರಿಗೆ ಅಷ್ಟು ಇಂಪಾರ್ಟೆನ್ಸ್​ ಕೊಡಬಾರದು, ನನಗೆ ಪ್ರಚಾರ ಬೇಕಿಲ್ಲ, ಅವಶ್ಯಕತೆಯೂ ಇಲ್ಲ, ಎಂದು ಹೇಳಿದ್ದಾರೆ.

ಟಿಆರ್​ಪಿ ಬೇಕಾಗಿರುವುದು ಮಾಧ್ಯಮದವರಿಗೆ ನಮಗಲ್ಲ, ಇವರಿಗೆ ಮಹತ್ವ ಕೊಡಲೇಬಾರದು, ಸುದ್ದಿ ಕೊಡೋರು ನಾವು, ಬೇಕಾಗಿರೋದು ನಿಮಗೆ ಹಾಗಾಗಿ ನೀವು  ಕಾಯಬೇಕು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಹಾಗೂ ಕೆಡಿಪಿ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಬೆಳಗ್ಗೆಯಿಂದ ಮಾಧ್ಯಮಗಳ ಜತೆಗೆ ಮಾತನಾಡಲು ನಿರಾಕರಿಸಿದ ಅವರು, ಮಧ್ಯಾಹ್ನ ಮಾಧ್ಯಮದವರು ಕಾಣುತ್ತಿದ್ದಂತೆ ಈ ಹೇಳಿಕೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net