More

    ದೇಶಾದ್ಯಂತ ಹೆಚ್ಚಿದ ಪ್ರತಿಭಟನೆ: ಇತ್ತ ಮತ್ತೆ ಎದುರಾಯ್ತು ಕರೊನಾ 4ನೇ ಅಲೆ ಭೀತಿ!

    ನವದೆಹಲಿ: ಒಂದೆಡೆ ಪ್ರತಿಭಟನೆ ಕಾವು, ಮತ್ತೊಂದೆಡೆ ಜನಸಮೂಹ ಸೇರ್ಪಡೆಯಿಂದಾಗಿ ಮತ್ತೆ ಕರೊನಾ ಪ್ರಕರಣಗಳ ಹೆಚ್ಚಳ. ಇದು ಹೀಗೆ ಮುಂದುವರಿದರೆ ಕಳೆದೆರಡು ವರ್ಷದ ಪರಿಸ್ಥಿತಿ ಮತ್ತೆ ಮರುಕಳಿಸಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಆತಂಕ ವ್ಯಕ್ತಪಡಿಸಿದೆ.

    ಕಳೆದ 24 ಗಂಟೆಗಳಲ್ಲೇ 13, 216 ಪ್ರಕರಣಗಳು ದಾಖಲಾಗಿದ್ದು, 23 ಮಂದಿ ಮೃತಪಟ್ಟಿರುವುದು ವರದಿಯಾಗಿದೆ. ಶನಿವಾರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿಯಲ್ಲಿ 68,108 ಸಕ್ರಿಯ ಪ್ರಕರಣಗಳಲ್ಲಿ 5,045 ಸೋಂಕಿತರು ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದೆ.

    ಈ ನಡುವೆ 8,148 ಮಂದಿ ಗುಣಮಖರಾಗಿದ್ದು, ದೇಶಾದ್ಯಂತ ಈವರೆಗೆ ಒಟ್ಟು 4,26,90,845 ಮಂದಿ ಗುಣಮುಖರಾಗಿದ್ದಾರೆ. ಆದರೆ ದಿನವೊಂದಕ್ಕೆ ಶೇ.2.73ರಷ್ಟು ಹೆಚ್ಚಳ ಕಾಣುತ್ತಿದೆ ಎಂದು ಸಚಿವಾಲಯ ಕಳವಳ ವ್ಯಕ್ತಪಡಿಸಿದೆ.

    ಈ ನಡುವೆ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳಿಂದಾಗಿ ಜನರು ಒಂದೆಡೆ ಸೇರುತ್ತಿರುವುದರಿಂದ ಕರೊನಾ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

    ಕೇರಳದಲ್ಲಿ 13, ಮಹಾರಾಷ್ಟ್ರ 3, ಕರ್ನಾಟಕ 2 ಮತ್ತು ನವದೆಹಲಿ, ಮೇಘಾಲಯ, ಪಂಜಾಬ್​, ಉತ್ತರಾಖಂಡ್​ ಮತ್ತು ಉತ್ತರ ಪ್ರದೇಶದಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ. (ಏಜೆನ್ಸೀಸ್​)

    ಅಗ್ನಿಪಥಕ್ಕೆ ವಿರೋಧ: ಗೃಹ ಸಚಿವರ ನೇತೃತ್ವದಲ್ಲಿ ಇಂದು ಮಹತ್ವದ ಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts