More

    ಗುಣಮಟ್ಟ ಆರೋಗ್ಯ ಸೇವೆ ಒದಗಿಸಿ

    ಕವಿತಾಳ: ಸಮೀಪದ ಬಾಗಲವಾಡ ಆರೋಗ್ಯ ಕೇಂದ್ರಕ್ಕೆ ಗುರುವಾರ ರಾಷ್ಟ್ರೀಯ ಮೌಲ್ಯ ಮಾಪನ ಆರೋಗ್ಯ ತಂಡ ಭೇಟಿ ಮಾನದಂಡಗಳ ಮೌಲ್ಯ ಮಾಪನವನ್ನು ಪರಿಶೀಲಿಸಿತು.

    ಹಿರಿಯ ಮೌಲ್ಯ ಮಾಪಕ ಡಾ.ಸುಬ್ರಮಣಿಯನ್ ಅವರು ಆರೋಗ್ಯ ಸೇವೆಯನ್ನು ಸಾರ್ವಜನಿಕರಿಗೆ ತಲುಪಿಸುವ ಬಗ್ಗೆ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು. ಆರೋಗ್ಯ ಕೇಂದ್ರದ ಸಿಬ್ಬಂದಿ ಮಹೇಶ ಅವರು ಜನರಿಗೆ ತಲುಪಿಸಿದ ಸೇವೆಯ ಬಗ್ಗೆ ಮಾಹಿತಿ ನೀಡಿದರು. ಸಕಾಲಕ್ಕೆ ಜನರಿಗೆ ಸೇವೆಯನ್ನು ನೀಡಬೇಕು. ಗುಣಮಟ್ಟತೆಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಡಾ.ಸುಬ್ರಮಣಿಯನ್ ಸೂಚಿಸಿದರು.

    ಸಾರ್ವಜನಿಕರು ಕುಷ್ಠರೋಗ ಯಾವುದೇ ಶಾಪ ಅಥವಾ ಪಾಪದಿಂದ ಬರುವುದಿಲ್ಲ. ಸಕಾಲಕ್ಕೆ ಚಿಕಿತ್ಸೆ ಪಡೆದಾಗ ಗುಣಮುಖರಾಗಬಹುದು ಎಂದು ತಿಳಿಸಿದರು. ಕೇಂದ್ರದ ತಂಡದ ಡಾ.ಮಹ್ಮದ್ ರಿಜ್ವಾನ್ ಅವರು ತಾಯಿ ಮತ್ತು ಮಕ್ಕಳ ಆರೋಗ್ಯದ ಮಹತ್ವ ಕುರಿತು ಜನರಿಗೆ ತಿಳಿಸಿದರು.
    ತಾಲೂಕು ಆರೋಗ್ಯಾಧಿಕಾರಿ ಡಾ.ಶರಣಬಸವ, ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಶಿವುಕುಮಾರ, ವ್ಯವಸ್ಥಾಪಕ ಹರೀಶ, ಕ್ಷೇತ್ರ ಶಿಕ್ಷಣಧಿಕಾರಿ ಬಾಲಪ್ಪ ನಾಯಕ, ಸಮುದಾಯ ಆರೋಗ್ಯಾಧಿಕಾರಿ ಶರಣಯ್ಯ ಹಿರೇಮಠ, ಲ್ಯಾಬ್‌ಟೆಕ್ನಿಶಿಯನ್ ಮನ್ಸೂರ್ ಅಲಿ, ಫಾರ್ಮಸಿಸ್ಟ್ ಉಪೇಂದ್ರ, ಆಶಾ ಕಾರ್ಯ ಕರ್ತೆ ಶಿವಮ್ಮ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts