ದೇವರಜೀವನಹಳ್ಳಿ ಗಲಭೆಗೂ ಕಾಂಗ್ರೆಸ್​ಗೂ ಸಂಬಂಧ ಇಲ್ವಂತೆ...

dks
Published on

ಬೆಂಗಳೂರು: ಡಿ.ಜೆ. ಹಳ್ಳಿ ಗಲಭೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಸರ್ಕಾರ ಸೂಕ್ತ ಸಮಯದಲ್ಲಿ ಅಗತ್ಯ ಕ್ರಮ ಕೈಗೊಳ್ಳದಿದ್ದ ಕಾರಣ ಗಲಭೆ ನಡೆದಿದ್ದು, ಇದೀಗ ಊಹಾಪೋಹ ಸೃಷ್ಟಿಸಿ ತನ್ನ ವೈಫಲ್ಯ ಮುಚ್ಚಿಕೊಳ್ಳುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೂರಿದ್ದಾರೆ.

ಪ್ರಸನ್ನಕುಮಾರ್ ಪಕ್ಷಕ್ಕೆ ಮರಳುವ ಬಗ್ಗೆ ಬಹಳ ದಿನದಿಂದ ಅರ್ಜಿ ಹಾಕಿದ್ದಾರೆ. ಆ ವಿಚಾರ ನಿರ್ಧರಿಸಲು ಪರಿಶೀಲನಾ ಸಮಿತಿ ಇದೆ. ಶ್ರೀನಿವಾಸ ಮೂರ್ತಿ 70 ಸಾವಿರ ಮತಗಳಿಂದ ಗೆದ್ದಿದ್ದಾರೆ. ಅಭ್ಯರ್ಥಿ ಬದಲಾವಣೆ ಮಾಡುವ ಉದ್ದೇಶ ಇಲ್ಲ ಎಂದು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

ನಾನು ಅಖಂಡ ಜತೆ ಮಾತನಾಡಿದ್ದು, ಪ್ರಸನ್ನಕುಮಾರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಅಭ್ಯಂತರ ಇಲ್ಲ ಎಂದಿದ್ದಾರೆ ಎಂದು ಹೇಳಿದರು.

ಸರಳ ಆಚರಣೆ: ಆ. 20ರಂದು ರಾಜೀವ್ ಗಾಂಧಿ ಜನ್ಮದಿನವಾಗಿದ್ದು, ಪ್ರತಿವರ್ಷ ತಮಿಳುನಾಡಿನ ಪೆರಂಬದೂರ್​ನಿಂದ ವಿವಿಧ ನಗರಗಳ ಮೂಲಕ ನವದೆಹಲಿವರೆಗೂ ಸದ್ಭಾವನಾ ಜ್ಯೋತಿ ಯಾತ್ರೆ ನಡೆಸುವ ಪದಟಛಿತಿಯನ್ನು ಕಾಂಗ್ರೆಸ್ ಹಮ್ಮಿಕೊಳ್ಳುತ್ತಿದೆ. ಈ ಬಾರಿ ಕರೊನಾ ಕಾರಣ ಸರಳವಾಗಿ ಜ್ಯೋತಿಯನ್ನು ಸ್ವಾಗತಿಸಲಾಗುವುದು ಎಂದರು. ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಜನ್ಮದಿನ ಹಿನ್ನೆಲೆಯಲ್ಲಿ 20ರಂದು ‘ಜನಧ್ವನಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net