

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಚಾರದಲ್ಲಿ ಕಡೆಗಣನೆ ಮುಂದುವರಿದಿದೆ.
ಹೌದು! ಮಾರಕ ಕಾಯಿಲೆಗಳಿಗೆ ಎಡೆಮಾಡಿಕೊಡುವ ಪ್ಲಾಸ್ಟಿಕ್, ಪೇಪರ್ಗಳನ್ನು ಆಹಾರ ಪದಾರ್ಥಗಳ ಪಾರ್ಸಲ್ಗಳಿಗೆ ಬಳಸುವ ಚಾಳಿ ನಿಂತಿಲ್ಲ. ಮತ್ತೊಂದೆಡೆ ತಿಂಡಿ ತಿನಿಸುಗಳ ತಯಾರಿಕೆಯಲ್ಲಿ ಗುಣಮಟ್ಟವಿಲ್ಲದ ಉತ್ಪನ್ನಗಳು ಮತ್ತು ಅಶುದ್ಧ ನೀರನ್ನು ಬಳಸುವ ಧೋರಣೆ ಪ್ರದರ್ಶಿಸಲಾಗುತ್ತಿದೆ. ಇದರಿಂದ ಜನರು ವಿಧಿಯಿಲ್ಲದೇ ಆರೋಗ್ಯ ಹದಗೆಡಿಸುವ ಆಹಾರವನ್ನು ಸೇವಿಸುವಂತಾಗಿದೆ.
ಪ್ಲಾಸ್ಟಿಕ್ ಬಳಕೆ ನಿಂತಿಲ್ಲ: ಚಿಕ್ಕಬಳ್ಳಾಪುರವನ್ನು ಪ್ಲಾಸ್ಟಿಕ್ಮುಕ್ತ ಜಿಲ್ಲೆಯನ್ನಾಗಿಸಲಾಗುತ್ತದೆ ಎಂಬುದಾಗಿ ಜಿಲ್ಲಾಡಳಿತ ಹೇಳುತ್ತಿದೆ. ಆದರೆ, ಕಸದ ರಾಶಿಯಲ್ಲೂ, ಪ್ರಮುಖ ವೃತ್ತಗಳು, ವಹಿವಾಟು ಸ್ಥಳಗಳು ಸೇರಿ ಪ್ರತಿಯೊಂದು ಕಡೆಯೂ ಮಾರಕ ಉತ್ಪನ್ನವೇ ರಾರಾಜಿಸುತ್ತಿರುತ್ತದೆ. ಪರಿಸರಸ್ನೇಹಿ ಪರ್ಯಾಯ ವಸ್ತುಗಳ ಬಳಕೆ ಕಾಟಾಚಾರಕ್ಕೆ ಎಂಬಂತಾಗಿದೆ. ಮತ್ತೊಂದೆಡೆ ಇಡ್ಲಿ ತಯಾರಿಕೆಯ ಉಪಕರಣ, ಆಹಾರ ಉತ್ಪನ್ನದ ಪಾರ್ಸಲ್ಗಳಲ್ಲೂ, ತೊಳೆಯುವ ಹೊರೆಯನ್ನು ತಪ್ಪಿಸಿಕೊಳ್ಳಲು ಊಟದ ತಟ್ಟೆಯಲ್ಲಿ ಪ್ಲಾಸ್ಟಿಕ್ ಕವರ್ಗಳಲ್ಲಿ ಇಟ್ಟು ನೀಡಲಾಗುತ್ತಿದೆ.
ಅನಾರೋಗ್ಯ ಸಮಸ್ಯೆ: ಜಿಲ್ಲೆಯಲ್ಲಿನ ಬಹುತೇಕ ದುಬಾರಿ ಸೇವಾ ದರದ ಹೋಟೆಲ್, ಅಂಗಡಿಗಳಲ್ಲೂ ಸ್ವಚ್ಛತೆ ಕಡೆಗಣಿಸಲಾಗಿದೆ. ಅಡುಗೆ ಕೋಣೆ, ಆಹಾರ ಪದಾರ್ಥಗಳ ದಾಸ್ತಾನು ಜಾಗ, ನೀರು ಶೇಖರಣೆಯ ಸ್ಥಳಗಳಲ್ಲಿ ನೈರ್ಮಲ್ಯ ಹದಗೆಟ್ಟಿರುತ್ತದೆ. ಸಿಬ್ಬಂದಿ ಹೊರತುಪಡಿಸಿ ಗ್ರಾಹಕರನ್ನು ಒಳಗೆ ಬಿಡುವುದಿಲ್ಲ. ಯಾವುದೇ ದೂರು ಬಾರದೇ ರ್ನಿದಿಷ್ಟ ಹೋಟೆಲ್ಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುವುದಿಲ್ಲ. ಹಿಂದೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅನುಷ್ಠಾನ ವಿಚಾರದಲ್ಲಿ ಬೀದಿಬದಿಯ ವ್ಯಾಪಾರಸ್ಥರಿಗೆ ಕಿರುಕುಳ ನೀಡಲಾಯಿತು. ದೇಗುಲಗಳಲ್ಲಿ ಪ್ರಸಾದ ವಿತರಣೆಯ ಸಂದರ್ಭದಲ್ಲೂ ನಾನಾ ನಿಯಮಗಳ ಪಾಲನೆಯ ಹೆಸರಿನಲ್ಲಿ ಅಡ್ಡಿಪಡಿಸಲಾಯಿತು. ದೊಡ್ಡ ಹೋಟೆಲ್ಗಳ ತಂಟೆಗೆ ಮಾತ್ರ ಹೋಗಲಿಲ್ಲ, ಮತ್ತೆ ದಿನಗಳು ಕಳೆದಂತೆ ಸಂಪೂರ್ಣ ಕಡೆಗಣನೆ ಧೋರಣೆ ಪ್ರದರ್ಶಿಸಿದ್ದು ಸಮಸ್ಯಾತ್ಮಕ ಸ್ಥಳಗಳಲ್ಲಿ ಸೂಕ್ತ ನಿಗಾ, ಪರಿಹಾರ ಕ್ರಮಗಳು ಮತ್ತು ಮಾರ್ಗದರ್ಶನ ನೀಡುವಲ್ಲಿ ವೈಲ್ಯ ಕಂಡು ಬರುತ್ತಿದೆ.
ದಂಡ ವಸೂಲಿ, ಎಚ್ಚರಿಕೆ
ಆಹಾರ ಸಿದ್ಧಪಡಿಸುವ ಸ್ಥಳ ಮತ್ತು ಮಾರುವ ಸ್ಥಳಗಳಿಗೆ ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ ಗುಣಮಟ್ಟದಲ್ಲಿ ನ್ಯೂನ್ಯತೆಗಳು ಕಂಡುಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ 41 ವ್ಯಾಪಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. 27 ಸಾವಿರ ರೂ. ದಂಡ ವಿಧಿಸಲಾಗಿದೆ ಎಂದು ಆರೋಗ್ಯ ಇಲಾಖೆ ಆಹಾರ ಸುರಕ್ಷತಾಧಿಕಾರಿಗಳ ಕಚೇರಿ ತಿಳಿಸಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ವತಿಯಿಂದ ಆ.30 ಮತ್ತು ಆ.31ರಂದು ಜಿಲ್ಲಾದ್ಯಂತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅನುಷ್ಠಾನ ಆಂದೋಲನ ಕೈಗೊಂಡಿದ್ದು ಆಯಾ ವ್ಯಾಪ್ತಿಯಲ್ಲಿ ಆಹಾರ ಸುರಕ್ಷತಾಧಿಕಾರಿಗಳು ವಿವಿಧ ಅಂಗಡಿ, ಹೋಟೆಲ್, ರೆಸ್ಟೋರೆಂಟ್, ಬೇಕರಿ, ಬೀದಿಬದಿ ವ್ಯಾಪಾರಸ್ಥರು ಮತ್ತು ಇತರ ಆಹಾರ ವ್ಯಾಪಾರಿಗಳನ್ನು ಭೇಟಿ ನೀಡಿ ಪರಿಶೀಲಿಸಿದ್ದು ಮಾಹಿತಿ ಸಂಗ್ರಹಿಸಲಾಗಿದೆ. 89 ಸ್ಥಳಗಳ ಪೈಕಿ 41 ಕಡೆ ನ್ಯೂನತೆಗಳು ಕಂಡುಬಂದಿದ್ದು ದಂಡ ವಿಧಿಸಲಾಗಿದೆ ಎಂದು ತಿಳಿಸಿದೆ. ಆಹಾರ ಪದಾರ್ಥಗಳ ತಯಾರಕರು, ಮಾರಾಟಗಾರರು, ದಾಸ್ತಾನುದಾರರು ಶುಚಿತ್ವಕ್ಕೆ ಒತ್ತು ನೀಡಬೇಕು. ಗ್ರಾಹಕರಿಗೆ ಶುದ್ಧವಾದ ಆಹಾರವನ್ನು ಮತ್ತು ನೀರನ್ನು ಪೂರೈಸಬೇಕು. ಇದರ ಮೂಲಕ ಸಾರ್ವಜನಿಕರ ಆರೋಗ್ಯಕ್ಕೆ ಒತ್ತು ಕೊಡಬೇಕು. ಹಾಗೆಯೇ ಸಿಬ್ಬಂದಿ ಸಹ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಬೇಕು ಎಂದು ತಿಳಿಸಿದೆ. ಯಾವುದೇ ಕಾರಣಕ್ಕೂ ಆಹಾರಕ್ಕೆ ಕೃತಕ ಬಣ್ಣಗಳನ್ನು ಬಳಸಬಾರದು. ಮೊಟ್ಟೆ, ಮೀನು, ಮಾಂಸದ ಪದಾರ್ಥಗಳನ್ನು ಸೂಕ್ತ ತಾಪಮಾನದಲ್ಲಿ ಸಂಗ್ರಹಿಸಿ, ಬಳಸಬೇಕು ಎಂದೂ ತಿಳಿಸಿದೆ.
ಕೃತಕ ಬಣ್ಣದ ಉಪಯೋಗ
ಇತ್ತೀಚೆಗೆ ಸರ್ಕಾರವು ಕಬಾಬ್, ಗೋಬಿ ಮಂಚೂರಿ ಸೇರಿ ವಿವಿಧ ಆಹಾರ ಉತ್ಪನ್ನಗಳ ತಯಾರಿಕೆಯಲ್ಲಿ ಕೃತಕ ಬಣ್ಣ ಬಳಸುವುದಕ್ಕೆ ಕಡಿವಾಣ ಹಾಕಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ನಿರ್ದಾಣ್ಯ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ಇತ್ತೀಚೆಗಿನ ಆದೇಶ ಮತ್ತು ಅಧಿಕಾರಿಗಳ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಮಾಲೀಕರು ಅರ್ಲಟ್ ಆಗಿದ್ದಾರೆ.
ದಿನಪತ್ರಿಕೆಗಳ ಬಳಕೆ
ಹೋಟೆಲ್, ಚಾಟ್ಸ್ ಅಂಗಡಿ, ತಳ್ಳುವ ಗಾಡಿಗಳು ಸೇರಿ ಹಲವೆಡೆ ಬಿಸಿಬಿಸಿಯಾದ ಆಹಾರ ಉತ್ಪನ್ನಗಳನ್ನು ಪೇಪರ್ಗಳಲ್ಲಿ ನೀಡಲಾಗುತ್ತಿದೆ. ಇಂಕ್ನಲ್ಲಿ ಮುದ್ರಿತವಾದ ಕಾಗದ ಬಳಕೆ ಅಪಾಯಕಾರಿ ಎನ್ನುವ ಆರೋಗ್ಯ ಇಲಾಖೆ ಅಧಿಕಾರಿಗಳ ಎಚ್ಚರಿಕೆಗೂ ತಲೆಕೆಡಿಸಿಕೊಳ್ಳುತ್ತಿಲ್ಲ. ಬೆರಳೆಣಿಕೆಯ ಜಾಗದಲ್ಲಿ ಮಾತ್ರ ಬಾಳೆಎಲೆ, ಅಡಕೆ ತಟ್ಟೆ ಬಳಸಲಾಗುತ್ತಿದೆ.
ಆಹಾರ ಸಿದ್ಧಪಡಿಸುವ ಸ್ಥಳ, ವ್ಯಾಪಾರದ ಸ್ಥಳಗಳಲ್ಲಿ ಪ್ರಮುಖವಾಗಿ ಸಂಬಂಧಪಟ್ಟ ಮಾಲೀಕರು ಶುಚಿತ್ವ ಕಾಪಾಡಿಕೊಳ್ಳಬೇಕು. ಆಹಾರ ಸುರಕ್ಷತೆ ಕಾಯ್ದೆಯ ನಿಯಮಗಳನ್ನು ಪಾಲಿಸಬೇಕು. ಗ್ರಾಹಕರಿಗೆ ಗುಣಮಟ್ಟದ ಉತ್ತಮ ಸೇವೆ ನೀಡಬೇಕು.
ಡಾ. ಧಮೆಂರ್ದ್ರ ಜಿಲ್ಲಾ ಅಂಕಿತಾಧಿಕಾರಿ ಹಾಗೂ ಆಹಾರ ಸುರಕ್ಷತಾಧಿಕಾರಿ, ಚಿಕ್ಕಬಳ್ಳಾಪುರ
ಆಹಾರ ಉತ್ಪನ್ನಗಳ ತಯಾರಿಕೆ ಮತ್ತು ಪಾರ್ಸಲ್ ವೇಳೆ ಮಾರಕ ಪೇಪರ್, ಪ್ಲಾಸ್ಟಿಕ್ ಬಳಕೆಯ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಇತ್ತೀಚೆಗೆ ಗುಣಮಟ್ಟವಿಲ್ಲದ ಆಹಾರ ಪದಾರ್ಥಗಳು, ನೀರಿನ ಸೇವನೆಯಿಂದ ಟೈಾಯಿಡ್ಗೆ ಒಳಗಾಗಿದ್ದು ಹೊರಗಿನ ತಿಂಡಿ ತಿನಿಸು, ನೀರು ಸೇವಿಸದಂತೆ ವೈದ್ಯರು ಸಲಹೆ ನೀಡಿದ್ದಾರೆ.
ರಾಮ್ಕುಮಾರ್ ಚಿಕ್ಕಬಳ್ಳಾಪುರ