ಅಂಗವಿಕಲರಿಗಿಲ್ಲ ಸಾಧನ ಸಲಕರಣೆ !

04-02-rama- for physical challange story
Published on

*ವಾರ್ಷಿಕ ಪರೀಕ್ಷೆ ಸಮೀಪಿಸುತ್ತಿದ್ದರೂ ಕೈಸೇರಿಲ್ಲ

* ವಿಳಂಬದಿಂದಾಗುತ್ತಿರುವ ತೊಂದರೆ ಬಗ್ಗೆ ಬೇಸರ

ಗಂಗಾಧರ್ ಬೈರಾಪಟ್ಟಣ ರಾಮನಗರ

ಈ ವರ್ಷದ ಕಲಿಕಾ ಅವಧಿ ಮುಗಿದು, ಇನ್ನೇನು ವಾರ್ಷಿಕ ಪರೀಕ್ಷೆಗಳು ಆರಂಭಗೊಳ್ಳುವ ಕಾಲ. ಆದರೆ, ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ರಾಮನಗರ ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳ ಅಂಗವಿಕಲ ಮಕ್ಕಳಿಗೆ ಉಚಿತವಾಗಿ ನೀಡಬೇಕಾಗಿರುವ ಅಗತ್ಯ ಸಾ‘ನ ಸಲಕರಣೆಗಳು ಇನ್ನೂ ಕೈ ಸೇರಿಲ್ಲ.

ಪ್ರತಿ ಎರಡು ವರ್ಷಗಳಿಗೊಮ್ಮೆ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ವಿವಿಧ ಅಂಗ ವೈಕಲ್ಯಗಳಿಂದ ಬಳಲುತ್ತಿರುವ 1-10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ, ಅವರ ವೈಕಲ್ಯಕ್ಕೆ ಅನುಗುಣವಾಗಿ ಸಾಧನ ಸಲಕರಣೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ಆದರೆ, ಮಕ್ಕಳನ್ನು ತಜ್ಞರಿಂದ ಪರೀಕ್ಷೆಗೆ ಒಳಪಡಿಸಿ, ಮೌಲ್ಯಾಂಕನ ಮಾಡಿ ಅವರಿಗೆ ಸಾಧನ ಸಲಕರಣೆಗಳನ್ನು ಹಸ್ತಾಂತರ ಮಾಡುವ ವೇಳೆಗಾಗಲೇ ಆ ಮಕ್ಕಳು ಬೆಳೆದು ದೊಡ್ಡವರಾಗುವ ಕಾರಣ, ನೀಡುವ ಪರಿಕರಗಳು ಬಳಕೆಗೆ ಯೋಗ್ಯವಾಗದೇ ಮೂಲೆ ಸೇರುತ್ತಿರುವ ಆರೋಪ ಕೇಳಿ ಬಂದಿದೆ. ಕೇಂದ್ರ, ರಾಜ್ಯ ಸರ್ಕಾರಗಳು ಅಲಿಂಕೋ ಮೂಲಕ ಈ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದು, ವಿಳಂಬದಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಈಗಷ್ಟೇ ಮುಗಿದಿದೆ?

ಬಹುತೇಕ ಸರ್ಕಾರಿ ಶಾಲೆಗಳು ಆರಂ‘ವಾಗುವುದೇ ಪ್ರತಿ ವರ್ಷ ಜೂನ್ ಒಂದರಿಂದ. ಒಂದನೇ ತರಗತಿ ಹೊರತುಪಡಿಸಿ ಉಳಿದ 9 ತರಗತಿಗಳ ವಿದ್ಯಾರ್ಥಿಗಳ ದಾಖಲಾತಿ ಅದಾಗಲೇ ಆಗಿರುತ್ತದೆ. ಹೆಚ್ಚೆಂದರೆ ಜುಲೈನಲ್ಲಿ ಅಂಗವಿಕಲ ಮಕ್ಕಳನ್ನು ತಜ್ಞರಿಂದ ಪರೀಕ್ಷೆಗೆ ಒಳಪಡಿಸಿ, ಅಗತ್ಯವಿದ್ದರೆ ಅಂತಹ ಮಕ್ಕಳಿಗೆ ಸಲಕರಣೆಗಳನ್ನು ಶಿಾರಸ್ಸು ಮಾಡಿ ಹಾಗೂ ಅಗತ್ಯ ದಾಖಲೆ ಮತ್ತು ಅಳತೆಯನ್ನು ಪಡೆದು ಒಂದೆರಡು ತಿಂಗಳಲ್ಲಿ ಮಕ್ಕಳಿಗೆ ಸಲಕರಣೆಗಳನ್ನು ನೀಡಬೇಕು. ದಸರಾ ರಜೆ ಕಳೆದ ನಂತರ ಪ್ರತಿವರ್ಷ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿ ಅಳತೆ ಪಡೆಯಲಾಗುತ್ತಿದೆ. ಈ ವರ್ಷ ರಾಮನಗರ ಜಿಲ್ಲೆಯಲ್ಲಿ ನವೆಂಬರ್ ಮೊದಲ ಎರಡು ವಾರ ಪರೀಕ್ಷೆಗೆ ಒಳಪಡಿಸಿ ಮಾಹಿತಿಯನ್ನು ಪಡೆದುಕೊಂಡು ಹೋಗಿದ್ದಾರೆ.

ಉಪಯೋಗಕ್ಕೆ ಬರುತ್ತಿಲ್ಲ

ವಿದ್ಯಾರ್ಥಿಗಳ ದೈಹಿಕ ಬೆಳವಣಿಗೆ 1-10ನೇ ತರಗತಿ ಅವಧಿಯಲ್ಲಿ ಹೆಚ್ಚಾಗಿ ಇರುತ್ತದೆ. ವರ್ಷದಿಂದ ವರ್ಷಕ್ಕೆ ಇವರ ಬೆಳವಣಿಗೆ ಹೆಚ್ಚುತ್ತಲೇ ಇರುತ್ತದೆ. ಶೈಕ್ಷಣಿಕ ವರ್ಷದ ಕೊನೆ ಹಂತದಲ್ಲಿ ಅಂಗವಿಕಲ ಮಕ್ಕಳ ಪರೀಕ್ಷೆ ಮತ್ತು ಸಾ‘ನ ಸಲಕರಣೆಗಳ ಅಳತೆಯನ್ನು ತೆಗೆದುಕೊಂಡು ಹೋಗುವ ಅಲಿಂಕೋ ಸಂಸ್ಥೆ ಇವುಗಳನ್ನು ನೀಡುವುದು ಬಹುತೇಕ ಒಂದು ವರ್ಷದ ನಂತರವೇ. ಈ ಸಲಕರಣೆಗಳು ಅಳತೆ ಕಾರಣದಿಂದ ಮಕ್ಕಳು ಬಳಕೆ ಮಾಡಲು ಸಾ‘್ಯವಾಗದೇ ಮೂಲೆ ಸೇರುತ್ತಿವೆ. ವ್ಹೀಲ್ ಚೇರ್‌ಗಳನ್ನು ಹೊರತುಪಡಿಸಿ, ಬಹುತೇಕ ಎಲ್ಲ ಸಾಧನಗಳು ಅಳತೆ ಹಾಗೂ ಆಧುನಿಕತೆ ಕಳೆದುಕೊಂಡ ಕಾರಣ ಬಳಕೆ ಮಾಡದೇ ಮೂಲೆ ಸೇರುತ್ತಿವೆ ಎನ್ನುತ್ತಾರೆ ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಕರು. ಇದು ಕೇವಲ ಒಂದು ವರ್ಷದ ಸಮಸ್ಯೆಯಲ್ಲ, ಪ್ರತಿ ವರ್ಷ ಇದೇ ರೀತಿ ಆಗುತ್ತಿದ್ದು, ಕೆಲವು ಮಕ್ಕಳು ತಮಗೆ ನೀಡಿರುವ ಸಲಕರಣೆಗಳು ತಮಗೆ ಬಳಕೆ ಮಾಡಲು ಆಗುತ್ತಿಲ್ಲ ಎಂದು ವಾಪಸ್ ನೀಡಿದ್ದರೆ, ಮತ್ತೆ ಕೆಲವರು ಇವುಗಳನ್ನು ತೆಗೆದುಕೊಂಡೇ ಹೋಗುತ್ತಿಲ್ಲ.

ಯೋಜನೆ ಬಳಕೆ ಆಗಲಿ

ಸರ್ವ ಶಿಕ್ಷಣ ಅಭಿಯಾನದಡಿ ಅಂಗವಿಲಕ ಮಕ್ಕಳಿಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹ‘ಭಾಗಿತ್ವ ಇದ್ದು, ಇದನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ಅಲಿಂಕೋ ಸಂಸ್ಥೆಗೆ ನೀಡಲಾಗಿದೆ. ಆದರೆ, ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ಅಂಗವಿಲಕ ಮಕ್ಕಳಿಗೆ ತಲುಪಬೇಕಾದ ಸಾಧನಗಳು ತಲುಪದೇ ಇರುವುದು ಇಡೀ ಯೋಜನೆಯನ್ನು ಹಳ್ಳ ಹಿಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳು ಆರಂಭಗೊಂಡ ಮೊದಲೆರಡು ತಿಂಗಳಲ್ಲೇ ಅಂಗವಿಕಲ ಮಕ್ಕಳ ಮೌಲ್ಯಾಂಕನ ನಡೆಸಿ, ಕನಿಷ್ಠ ದಸರಾ ರಜೆ ವೇಳೆಗೆ ಸಾಧನಗಳನ್ನು ವಿತರಿಸಿದರೆ ಅನುಕೂಲವಾಗಲಿದೆ. ಇಲ್ಲವಾದರೆ ಇಡೀ ಯೋಜನೆ ಹೆಸರಿಗಷ್ಟೇ ಉಳಿಯಲಿದ್ದು, ಅರ್ಹರಿಗೆ ಸೌಲಭ್ಯ ತಲುಪುವುದು ಕಷ್ಟವಾಗಲಿದೆ.

---

ರಾಮನಗರ

ಹೆಸರು ಹೇಳಲಿಚ್ಚಿಸದ ಶಿಕ್ಷಕರು,

ಅಂಗವಿಕಲ ಮಕ್ಕಳಿಗೆ ಸಾಧನಗಳನ್ನು ನೀಡುವುದು ಒಳ್ಳೆಯ ಯೋಜನೆ, ಆದರೆ ಇದು ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ. ಇದರಿಂದಾಗಿ ಯೋಜನೆ ಮಕ್ಕಳಿಗೆ ತಲುಪುವ ವೇಳೆಗೆ ಮಕ್ಕಳು ಬೆಳೆದು ದೊಡ್ಡವರಾಗಿರುತ್ತಾರೆ. ಬಳಕೆ ಮಾಡಲು ಸಾಧ್ಯವಾಗದೆ ಪರಿಕರಗಳು ಮೂಲೆ ಸೇರುತ್ತಿವೆ. ಸಮಯಕ್ಕೆ ಸರಿಯಾಗಿ ಗುಣಮಟ್ಟದ ಸಾಧನಗಳನ್ನು ನೀಡಲು ಇಲಾಖೆ ಕ್ರಮ ಕೈಗೊಳ್ಳಬೇಕಿದೆ.

ಸಾಧನಗಳನ್ನು ಪಡೆಯಲು ಶಿಫಾರಸ್ಸುಗೊಂಡ ಮಕ್ಕಳ ವಿವರ

ತಾಲೂಕು    ಗುರಿ ಪಾಲ್ಗೊಂಡವರು ಶಿಫಾರಸ್ಸು

ಕನಕಪುರ    95      53                   53

ಮಾಗಡಿ     190    129                  56

ಚನ್ನಪಟ್ಟ ಣ 183     52                   34

ರಾಮನಗರ  148   48                   32

ಒಟ್ಟು          616    282               165

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net