ಅಕ್ಕನಹಳ್ಳಿ ಗ್ರಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ

IMG_20250425_160547
ಅಕ್ಕನಹಳ್ಳಿ ಕೂಡು ಗ್ರಾಮ ಪಂಚಾಯಿತಿಯ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಸಲ್ಲಿಸಿದ 12 ಸದಸ್ಯರು ಹಾಗೂ ಬೆಂಬಲಿಗರು.
Published on

ನುಗ್ಗೇಹಳ್ಳಿ: ಹೋಬಳಿಯ ಅಕ್ಕನಹಳ್ಳಿ ಕೂಡು ಗ್ರಾಮ ಪಂಚಾಯಿತಿಯ ಅಧ್ಯಕ್ಷರ ವಿರುದ್ಧ 12 ಜನ ಸದಸ್ಯರು ಶುಕ್ರವಾರ ಅವಿಶ್ವಾಸ ಮಂಡಿಸಿದರು.

ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 16 ಜನ ಸದಸ್ಯರ ಬಲ ಹೊಂದಿದ್ದು ಅದರಲ್ಲಿ 14 ಜನ ಸದಸ್ಯರು ಹಾಜರಿದ್ದರು. ಅವಿಶ್ವಾಸ ಮಂಡನೆ ಪರವಾಗಿ 12 ಜನ ಸದಸ್ಯರು ಮತ ಚಲಾಯಿಸಿದರೆ ರಾಜಕುಮಾರ್ ಹಾಗೂ ದಿನೇಶ್ ತಟಸ್ಥರಾಗಿದ್ದರು. ಮಂಜುಳಾ ಬೋರೇಗೌಡ ಅಧ್ಯಕ್ಷರಾಗಿದ್ದು, ಉಳಿದ ಸದಸ್ಯರ ಅಭಿವೃದ್ಧಿ ಕಾಮಗಾರಿ ಹಾಗೂ ಇತರ ವಿಚಾರಗಳಿಗೆ ಸ್ಪಂದಿಸದ ಕಾರಣ ಅಧ್ಯಕ್ಷರ ವಿರುದ್ಧ ಏ.15 ರಂದು ಅವಿಶ್ವಾಸ ನಿರ್ಣಯಕ್ಕೆ ಉಪ ವಿಭಾಗಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಶುಕ್ರವಾರ ಅವಿಸ್ವಾಸ ಮಂಡನೆಗೆ ದಿನಾಂಕ ನಿಗದಿಯಾಗಿತ್ತು. 14 ಸದಸ್ಯರು ಹಾಜರಾಗಿದ್ದರು. ಆದರೆ ಅವಿಶ್ವಾಸ ಮಂಡನೆಗೆ ಕೋರಂ ತೋರಿಸಲು ಹಾಲಿ ಅಧ್ಯಕ್ಷರು ಗೈರು ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ಮುಂದಿನ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಸಮಯ ನಿಗದಿಯಾಗಬೇಕಾಗಿದೆ ಎಂದು ಉಪ ವಿಭಾಗಾಧಿಕಾರಿ ಮಾರುತಿ ತಿಳಿಸಿದರು.

ಪಿಡಿಒ ಸಂದೀಪ್‌ರಾಜ್, ಸದಸ್ಯರಾದ ರತ್ನಾ, ರಂಗಾಚಾರ್, ಸೌಭಾಗ್ಯಮ್ಮ, ಶಾಂತಮ್ಮ, ಶಶಿಕಲಾ, ರಾಜಮ್ಮ, ಜೆಸಿಂತಾ ಮೇರಿ, ನಂಜುಂಡಯ್ಯ, ಕೃಷ್ಣಮೂರ್ತಿ, ಉಮೇಶ್, ಎ.ಆರ್.ಪುಟ್ಟರಾಜು, ಹೆಬ್ಬಾಳಲು ರವಿ, ಸೋಸಲಗೆರೆ ರಾಜಕುಮಾರ್, ಮುಳ್ಕೆರೆ ದಿನೇಶ್, ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net