ಹೊಸ ವರ್ಷಕ್ಕಿಲ್ಲ ಎಣ್ಣೆ ಕಿಕ್? 2 ದಿನ ಮದ್ಯದಂಗಡಿ ಬಂದ್

wine_shop_01052020
Published on

ಬೆಂಗಳೂರು: ಕರೊನಾ ನಿಯಂತ್ರಿಸುವ ಸಲುವಾಗಿ ಡಿಸೆಂಬರ್ 31 ಹಾಗೂ ಜನವರಿ.1ರಂದು ರಾಜ್ಯಾದ್ಯಂತ ಮದ್ಯದಂಗಡಿಗಳನ್ನು ಬಂದ್ ಮಾಡಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ.

ಮುಂದಿನ 48 ದಿನ ರಾಜ್ಯದಲ್ಲಿ ಕರೊನಾ 2ನೇ ಅಲೆ ಹೆಚ್ಚಾಗುವ ಆತಂಕ ಹಿನ್ನೆಲೆಯಲ್ಲಿ ಮದ್ಯದಂಗಡಿಗಳನ್ನು ಬಂದ್ ಆಗುವ ಸಾಧ್ಯತೆಯಿದೆ. ಬೇರೆ ದೇಶಗಳಲ್ಲಾಗಿರುವ ಪರಿಸ್ಥಿತಿಯನ್ನು ಅವಲೋಕಿಸಿದಾಗ ಮುಂದಿನ 45-90 ದಿನದೊಳಗೆ 2ನೇ ಅಲೆ ಬರುತ್ತದೆ ಹೇಳಲಾಗುತ್ತಿದೆ. ಹಾಗಾಗಿ, ರಾಜ್ಯದಲ್ಲೂ 2ನೇ ಅಲೆ ಬರುವ ಸಾಧ್ಯತೆ ಇದೆ ಎಂದು ತಾಂತ್ರಿಕ ಸಲಹಾ ಸಮಿತಿ ವರದಿ ನೀಡಿದೆ.

ಈ ನಿಟ್ಟಿನಲ್ಲಿ ಮದುವೆ ಸಮಾರಂಭಕ್ಕೆ 100, ರಾಜಕೀಯ ಹಾಗೂ ದಾರ್ಮಿಕ ಸಮಾರಂಭಕ್ಕೆ 200 ಹಾಗೂ ಅಂತ್ಯಕ್ರಿಯೆಯಲ್ಲಿ 50ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ ಎಂಬ ನಿಯಮ ಜಾರಿಯಲ್ಲಿದೆ. ಆದ್ದರಿಂದ, ಹೊಸ ವರ್ಷದ ಸಂದರ್ಭದಲ್ಲಿ ಮದ್ಯದಂಗಡಿಗಳಲ್ಲಿ ಹೆಚ್ಚು ಜನರು ಸೇರುವ ಆಂತಕವಿರುವುದರಿಂದ ಮದ್ಯದಂಗಡಿಗಳನ್ನು ಬಂದ್ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ.

ಸಾವಿರ ಕೋಟಿ ನಷ್ಟ?
ಕರೊನಾ ನಿಯಂತ್ರಿಸುವ ಸಲುವಾಗಿ ಲಾಕ್‌ಡೌನ್ ಹೇರಿದ್ದರಿಂದ ಮದ್ಯ ಮಾರಾಟದಿಂದ ಸರ್ಕಾರಕ್ಕೆ ಬೊಕ್ಕಸಕ್ಕೆ ಬರಬೇಕಿದ್ದ ಅಂದಾಜು 4 ಸಾವಿರ ಕೋಟಿ ರೂ.ನಷ್ಟವಾಗಿತ್ತು. ಇದೀಗ ಹೊಸ ವರ್ಷ ಸಂದರ್ಭದಲ್ಲಿ ಮತ್ತೆ ಮದ್ಯದಂಗಡಿಗಳನ್ನು ಬಂದ್ ಮಾಡಿದ್ದರೆ ಸರ್ಕಾರಕ್ಕೆ ಒಂದು ಸಾವಿರ ಕೋಟಿ ರೂ.ನಷ್ಟವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net