

ತಲ್ಲೂರ: ಮನುಷ್ಯನ ಭಾವನೆ ಪವಿತ್ರಗೊಳಿಸಿ ಅಂತರಂಗವನ್ನು ಶುದ್ಧೀಕರಿಸಲು ದೇವಾಲಯಗಳು ಸಹಕಾರಿಯಾಗಲಿವೆ ಎಂದು ಮುನವಳ್ಳಿ ಸೋಮಶೇಖರ ಮಠದ ಮುರಂದ್ರ ಸ್ವಾಮೀಜಿ ಹೇಳಿದರು.
ಗ್ರಾಮದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಗ್ರಾಮದೇವಿ ದೇವಸ್ಥಾನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶಿಲನ್ಯಾಸ ಪೂಜಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮುಂದಿನ ಪೀಳಿಗೆಗೆ ನಮ್ಮ ಸನಾತನ ಧರ್ಮ ಮತ್ತು ಸಂಸತಿ ಉಳಿಯಬೇಕಾದರೆ ಪುರಾತನ ದೇವಾಲಯಗಳ ರಣೆ ಮಾಡಿ ಜೀಣೋರ್ದ್ದಾರ ಮಾಡುತ್ತಿರುವುದು ಶ್ಲಾನೀಯ ಎಂದರು.
ಸವದತ್ತಿ ತಾಲೂಕು ಬಿಜೆಪಿ ಮಂಡಲ ಅಧ್ಯ ವಿರೂಪಾ ಮಾಮನಿ ಮಾತನಾಡಿ, ದೇವಾಲಯಗಳ ಅಭಿವದ್ಧಿ ವಿಚಾರದಲ್ಲಿ ರಾಜಕೀಯಕ್ಕೆ ಆಸ್ಪದ ನೀಡದೆ ಎಲ್ಲರೂ ಒಗ್ಗಟಿನಿಂದ ದೇವಾಲಯ ಅಭಿವದ್ಧಿಪಡಿಸಿ ನಿರಂತರವಾಗಿ ಪೂಜಾ ಕಾರ್ಯ ನೆರವೇರಿಸಬೇಕು ಎಂದರು.
ಅರಬಾವಿ ಪುಣ್ಯಾರಣ್ಯಮಠದ ಗುರುಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಪಲ್ಲಕ್ಕಿ ಮಹೋತ್ಸವ, ಶಿಲಾ ಮೆರವಣಿಗೆ ಜರುಗಿತು. ನಂತರ ಶಿಲನ್ಯಾಸಕ್ಕೆ ಶ್ರೀಗಳಿಂದ ಪೂಜೆ ಸಲ್ಲಿಸಲಾಯಿತು. ಅನ್ನಪ್ರಸಾದ ಜರುಗಿತು.
ತೊರಗಲ್ಲಮಠದ ದೀಪಕಸ್ವಾಮಿ, ತಾಪಂ ಮಾಜಿ ಅಧ್ಯ ವಿನಯಕುಮಾರ ದೇಸಾಯಿ, ಗ್ರಾಪಂ ಅಧ್ಯೆ ಕವಿತಾ ಬಾಲರಡ್ಡಿ, ಪಿಕೆಪಿಎಸ್ ಅಧ್ಯ ಮಹಾರುದ್ರಪ್ಪ ಉಪ್ಪಿನ, ಗ್ರಾಪಂ ಮಾಜಿ ಉಪಾಧ್ಯ ಬಾಬುಗೌಡ ಅಣ್ಣಿಗೇರಿ, ಮುಖಂಡ ಶಂಕರಗೌಡ ಪಟೀಲ, ಈರಣ್ಣ ಹುದ್ದಾರ, ಪ್ರಸನ್ನ್ ಶಾಸ್ತ್ರಿ, ಪಿಡಿಒ ವಿಜಯಕುಮಾರ ಅಂಗಡಿ, ಆರ್.ಎಸ್.ಕಲ್ಲನ್ನವರ, ಶಂಕರ ಬಡಿಗೇರ, ಆರ್.ಟಿ.ಜೋಲಾಪೂರಿ, ನೀಲಕಂಠ ಸರದಾರ, ಬಸವರಾಜ ಬಡಿಗೇರ, ಲೋಕನಾಥ ಪೂಜೇರ ಸೇರಿದಂತೆ ಗ್ರಾಮದೇವಿ ಸಮಿತಿ ಸದಸ್ಯರು ಇದ್ದರು. ಶಿಕ ಬಸನಗೌಡ ಅಣ್ಣಿಗೇರಿ ನಿರೂಪಿಸಿ, ವಂದಿಸಿದರು.