

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗ ಆಯೋಜಿಸಿದ್ದ ಎರಡು ದಿನಗಳ ಆಗೋನ್ ರಾಷ್ಟ್ರೀಯಮಟ್ಟದ ಮ್ಯಾನೇಜ್‌ಮೆಂಟ್ ಯುಜಿ ಮತ್ತು ಪಿಜಿ ಫೆಸ್ಟ್‌ನಲ್ಲಿ ಸುರತ್ಕಲ್ ಎನ್‌ಐಟಿಕೆ ಎಂಬಿಎ ವಿಭಾಗದ ವಿದ್ಯಾರ್ಥಿಗಳು ಚಾಂಪಿಯನ್ ಪ್ರಶಸ್ತಿ ಪಡೆದರೆ, ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿಗಳು ರನ್ನರ್ ಅಪ್ ಸ್ಥಾನ ಪಡೆದರು.
ಸಮಾರೋಪ ಸಮಾರಂಭದಲ್ಲಿ ಮಂಗಳೂರಿನ ಸಾಯಿ ಪ್ರೊಡಕ್ಷನ್ ನಿರ್ದೇಶಕ ಸಾಹಿಲ್ ಎಸ್.ರೈ ಮುಖ್ಯ ಅತಿಥಿಯಾಗಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ ವಿವೇಕ್ ಆಳ್ವ, ವಿಭಾಗ ಮುಖ್ಯಸ್ಥೆ ಪ್ರೊ.ಪ್ರಿಯಾ ಸಿಕ್ವೇರಾ, ಹಿರಿಯ ವಿದ್ಯಾರ್ಥಿ ಪೃಥ್ವೀಶ್, ಆಗೋನ್‌ನ ಅಧ್ಯಾಪಕ ಸಂಯೋಜಕಿ ಹರ್ಷಿತಾ ವಿ.ಶೆಟ್ಟಿ, ವಿದ್ಯಾರ್ಥಿ ಸಂಯೋಜಕ ಸುಶಾನ್ ಹಾಗೂ ಗೌತವಿ ಉಪಸ್ಥಿತರಿದ್ದರು. ದಿಶಾ ಸ್ವಾಗತಿಸಿದರು. ಶ್ರಾವ್ಯಾ, ಆರಾಧ್ಯಾ ನಿರೂಪಿಸಿದರು.