ನರೇಗಾದಲ್ಲಿ ಮೂಡುಬಿದಿರೆ ಅತ್ಯುತ್ತಮ ಸಾಧನೆ

Mbd_NREGA
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2024-25ನೇ ಸಾಲಿನಲ್ಲಿ ವಿವಿಧ ಕಾಮಗಾರಿಗಳನ್ನು ಅನುಷ್ಠಾನ ವಾಡಿ ವಾರ್ಷಿಕ ಗುರಿ ತಲುಪಿ ಮೂಡುಬಿದಿರೆ ತಾಲೂಕು ಉತ್ತಮ ಸಾಧನೆ ಮಾಡಿದೆ.

ತಾಲೂಕಿನಲ್ಲಿ ಒಟ್ಟು 12 ಗ್ರಾಮ ಪಂಚಾಯಿತಿಗಳಿದ್ದು, ತಾಲೂಕಿಗೆ ಒಟ್ಟು ವಾನವ ದಿನ ಸೃಜನೆಗಾಗಿ 74,916 ಗುರಿಯನ್ನು ನೀಡಿದ್ದು, 76,066 ತಲುಪಿ, ಶೇ.101.54 ರಷ್ಟು ಸಾಧನೆ ವಾಡಿದೆ. ದರೆಗುಡ್ಡೆ, ವಾಲ್ಪಾಡಿ, ನೆಲ್ಲಿಕಾರು, ಶಿರ್ತಾಡಿ, ಬೆಳುವಾಯಿ, ಪಡುವಾರ್ನಾಡು, ಪುತ್ತಿಗೆ, ಇರುವೈಲು ಗ್ರಾಪಂಗಳು ಅತ್ಯುತ್ತಮ ಸಾಧನೆ ವಾಡಿವೆ. ದರೆಗುಡ್ಡೆ ಗ್ರಾಪಂ ಹೆಚ್ಚಿನ ವಾನವ ದಿನ ಸೃಜಿಸಿದೆ. ವಾಲ್ಪಾಡಿ ಗ್ರಾಪಂ ಸತತ 12 ತಿಂಗಳು ಶೇ.100 ರಷ್ಟು ಗುರಿ ಸಾಧಿಸಿದೆ.

ತಾಲೂಕಿನಲ್ಲಿ ಹೆಚ್ಚು ವೈಯಕ್ತಿಕ ಕೆಲಸಗಳು ನಡೆಯುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅರ್ಜಿ ಸಲ್ಲಿಸಿ, ನರೇಗಾ ಕೆಲಸ ಪಡೆದಿದ್ದಾರೆ. ಅದರೊಂದಿಗೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಭಿವೃದ್ಧಿ ಕೆಲಸಗಳು ನಡೆದಿವೆ. ತಾಲೂಕಿನ ವಾನವ ದಿನ ಗುರಿ ಸಾಧನೆಗಾಗಿ ಸಿಬ್ಬಂದಿ, ಆಡಳಿತ ಮಂಡಳಿ ಹಾಗೂ ನರೇಗಾ ಫಲಾನುಭವಿಗಳು ಉತ್ತಮ ಸಹಕಾರ ನೀಡಿದ್ದಾರೆ ಎಂದು ಮೂಡುಬಿದಿರೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕುಸುವಾಧರ ಬಿ. ತಿಳಿಸಿದ್ದಾರೆ.

ಕಾರ್ಯನಿರ್ವಾಹಕ ಅಧಿಕಾರಿ, ಸಿಬ್ಬಂದಿ ಹಾಗೂ ಪಿಡಿಒ ಪ್ರಗತಿ ಪರಿಶೀಲನಾ ಸಭೆ ನಡೆಸಿ ಪಂಚಾಯಿತಿಗಳಿಗೆ ಭೇಟಿ ನೀಡಿ, ಜನರಿಗೆ ಕೆಲಸ ನೀಡಿ ಗುರಿ ಸಾಧಿಸುವಂತೆ ತಿಳಿಸುತ್ತಿದ್ದರು. ಜನರಿಗೆ ಕೆಲಸ ಸಿಗುವುದರೊಂದಿಗೆ ತಾಲೂಕಿನ ಪ್ರಗತಿಗೆ ಪೈಪೋಟಿ ನಡೆಸಿ, ಉತ್ತಮ ಸಾಧನೆ ನಮ್ಮ ತಾಲೂಕಿನಲ್ಲಾಗಿದೆ ಎಂದು ತಾಲೂಕು ಪಂಚಾಯಿತಿ ಪ್ರಭಾರ ಸಹಾಯಕ ನಿರ್ದೇಶಕ ಸಾಯಿಷ್ ಚೌಟ ವಾಹಿತಿ ನೀಡಿದ್ದಾರೆ.

ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಭಿವೃದ್ಧಿ ಕೆಲಸಗಳು ನಡೆದಿವೆ. ತಾಲೂಕಿನ ವಾನವ ದಿನ ಗುರಿ ಸಾಧನೆಗಾಗಿ ಸಿಬ್ಬಂದಿ, ಆಡಳಿತ ಮಂಡಳಿ ಹಾಗೂ ನರೇಗಾ ಫಲಾನುಭವಿಗಳು ಉತ್ತಮ ಸಹಕಾರ ನೀಡಿದ್ದಾರೆ. ಕುಸುಮಾಧರ ಬಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net