

ಕೊಳ್ಳೇಗಾಲ: ಜಿಲ್ಲಾ ಮಟ್ಟದ 2023-24ನೇ ಸಾಲಿನ ಕ್ರೀಡಾಕೂಟದಲ್ಲಿ ಪಟ್ಟಣದ ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಕ್ರೀಡೆಗಳಲ್ಲಿ ಗೆದ್ದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅಥ್ಲೆಟಿಕ್ಸ್, ಜಾವಲಿನ್ ಥ್ರೋನಲ್ಲಿ ಚಿರಂಜಿವಿ ಪ್ರಥಮ ಸ್ಥಾನ, ಎತ್ತರ ಜಿಗಿತದಲ್ಲಿ ಡಿ.ಆಕಾಶ್ ಹಾಗೂ ಆರ್.ರೇಖಾ ದ್ವಿತೀಯ ಸ್ಥಾನ, ಗುಂಡು ಎಸೆತದಲ್ಲಿ ನಿತೀನ್ ಮಯೂರ್ ತೃತೀಯ ಸ್ಥಾನ ಪಡೆದಿದ್ದಾರೆ. ಗುಂಪು ಆಟಗಳ ವಿಭಾಗದಲ್ಲಿ ವಾಲಿಬಾಲ್‌ನಲ್ಲಿ ಕಿರಣ್ ಮತ್ತು ತಂಡ ದ್ವಿತೀಯ ಸ್ಥಾನ, ಚದರಂಗ ಸ್ಪರ್ಧೆಯಲ್ಲಿ ಧನುಷ್ ಪ್ರಥಮ ಸ್ಥಾನ, ಮುನಿವೇಲ್ ನಾಲ್ಕನೇ ಸ್ಥಾನ, ಕುಮಾರ್‌ಸ್ವಾಮಿ ಐದನೇ ಸ್ಥಾನ ಪಡೆದಿದ್ದಾರೆ. ಬಾಸ್ಕೆಟ್‌ಬಾಲ್‌ನಲ್ಲಿ ವಿನಯ್, ಹರ್ಷ, ಕೀರ್ತನ, ವಿಶ್ವಮೂರ್ತಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕ್ರೀಡೆಯಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ಡಾ.ಎಸ್.ದತ್ತೇಶ್‌ಕುಮಾರ್, ಪ್ರಾಂಶುಪಾಲ ಡಿ.ಕೃಷ್ಣೇಗೌಡ, ದೈಹಿಕ ಶಿಕ್ಷಣ ನಿರ್ದೇಶಕ ಜಿ.ರಾಜಪ್ಪ, ಮಹೇಶ್ ಮತ್ತು ಕಾಲೇಜಿನ ಎಲ್ಲ ಸಿಬ್ಬಂದಿ ಅಭಿನಂದನೆ ಸಲ್ಲಿಸಿದರು.