ನಿರಾಣಿ ಗ್ರೂಪ್‌ನಿಂದ ಸದ್ಯದಲ್ಲೇ ವಿಮಾನ ಪೆಟ್ರೋಲ್ ತಯಾರಿಕೆ ಪ್ರಾರಂಭ

murugesh nirani
ಮಾಜಿ ಸಚಿವ ಮುರುಗೇಶ್ ನಿರಾಣಿ
Published on

ಮೈಸೂರು: ವಿಮಾನಗಳಿಗೆ ಬಳಕೆ ಮಾಡುವ ಪೆಟ್ರೋಲ್‌ಅನ್ನು ನಿರಾಣಿ ಗ್ರೂಪ್‌ನಿಂದ ತಯಾರಿಸುವ ಕಾರ್ಯಕ್ಕೆ ಸದ್ಯದಲ್ಲಿಯೇ ಚಾಲನೆ ನೀಡಲಾಗುವುದು ಎಂದು ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.

ಮುಧೋಳದ ವಿಜಯ (ಎಂಆರ್‌ಎಸ್) ಸೌಹಾರ್ದ ಕ್ರೆಡಿಟ್ ಸಹಕಾರ ಸಂಘದ ಮೈಸೂರು ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ಲಾಸ್ಟಿಕ್ ಪರಿಸರಕ್ಕೆ ಮಾರಕವಾಗಿದ್ದು, ಇದಕ್ಕೆ ಪರ್ಯಾಯವಾಗಿ ಬಯೋ ಪ್ಲಾಸ್ಟಿಕ್ ತಯಾರಿಸುವ ಕಾರ್ಖಾನೆಯನ್ನು ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ಬಿಹಾರದಲ್ಲಿ ಪ್ರಾರಂಭಿಸುತ್ತಿದ್ದೇವೆ. ಸಿಟ್ರಿಕ್ ಆ್ಯಸಿಡ್‌ಅನ್ನು ದೇಶದಲ್ಲಿ ಯಾರೂ ಸಹ ತಯಾರಿಸುತ್ತಿಲ್ಲ. ಅದನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಕಬ್ಬು, ಮೆಕ್ಕೆಜೋಳ ಹಾಗೂ ಅಕ್ಕಿಯಿಂದ ಇದನ್ನು ತಯಾರಿಸಬಹುದು. ಇದೇ ಧಾನ್ಯವನ್ನು ಬಯೋ ಪ್ಲಾಸ್ಟಿಕ್ ಹಾಗೂ ವಿಮಾನ ಇಂಧನ ತಯಾರಿಕೆಗೂ ಬಳಸಬಹುದು. ಇದರಿಂದ ರೈತರು ಬೆಳೆದ ಉತ್ಪನ್ನಗಳಿಗೆ ಬೆಲೆ ಹೆಚ್ಚಾಗುತ್ತದೆ ಎಂದರು.

ಪ್ರಸ್ತುತ ಒಂದು ಕ್ವಿಂಟಲ್ ಮೆಕ್ಕೆಜೋಳ ದರ 3 ಸಾವಿರ ರೂ. ಇದ್ದು, ಬಯೋ ಪ್ಲಾಸ್ಟಿಕ್ ಹಾಗೂ ವಿಮಾನ ಪೆಟ್ರೋಲ್ ತಯಾರಿಕೆ ಪ್ರಾರಂಭವಾದರೆ ಮೆಕ್ಕೆಜೋಳದ ದರ 5 ಸಾವಿರ ರೂ.ಗೆ ಏರಿಕೆಯಾಗಲಿದೆ. ನಾವು ಮಾಡುವ ಎಲ್ಲ ಕಾರ್ಖಾನೆಗಳು ರೈತರ ಕಲ್ಯಾಣಕ್ಕೆ ಮೀಸಲಾಗಿದೆ ಎಂದರು.

ನಗರಗಳಲ್ಲಿ ಉತ್ಪತಿಯಾಗುವ ತ್ಯಾಜ್ಯವನ್ನು ಬಳಕೆ ಮಾಡಿಕೊಂಡು ಕಂಪ್ರೆಸ್ಡ್ ಬಯೋ ಗ್ಯಾಸ್ ತಯಾರಿಸುವ 14 ಘಟಕಗಳನ್ನು ದೇಶದ ವಿವಿಧೆಡೆ ಪ್ರಾರಂಭಿಸಿದ್ದೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net