ಎಲ್ಲರೂ ಕಲಾವಿದರನ್ನು ಪ್ರೋತ್ಸಾಹಿಸಲಿ

Untitled design121
ಸಂಡೂರಿನಲ್ಲಿ ‘ಆಲಯ ಈಲಯ‘ ನಾಟಕ ವ್ಯವಸ್ಥಾಪಕ ದುಂಡೇಶ್ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ಕಸಾಪ ತಾಲೂಕು ಮಾಜಿ ಅಧ್ಯಕ್ಷ ಬಸವರಾಜ ಮಸೂತಿ, ಬ್ಯಾಂಕ್ ವ್ಯವಸ್ಥಾಪಕ ಕೆ.ಪ್ರಕಾಶ್, ನಿರ್ದೇಶಕ ಗಾಣಿಗರ ವಿರೇಶ್ ಇದ್ದರು.
Published on

ಸಂಡೂರು: ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನೀನಾಸಂ ಹೆಗ್ಗೋಡು ಕಲಾವಿದರ ತಂಡದಿಂದ ಬುಧವಾರ ‘ಆಲಯ ಈಲಯ’ ನಾಟಕ ಪ್ರದರ್ಶನ ನಡೆಯಿತು.

‘ಆಲಯ ಈಲಯ’ ನಾಟಕ ಪ್ರದರ್ಶನ

ತಾಲೂಕು ಕಸಾಪ ಮಾಜಿ ಅಧ್ಯಕ್ಷ ಬಸವರಾಜ ಮಸೂತಿ ಮಾತನಾಡಿ, ನಾಟಕದಲ್ಲಿ ಉತ್ತಮ ಅಂಶಗಳನ್ನು ಸ್ವೀಕರಿಸಬೇಕು. ಪ್ರತಿಯೊಬ್ಬರೂ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದರು

ದಕ್ಷಿಣ ಆಫ್ರಿಕಾದಲ್ಲಿ ನಡೆದ ವರ್ಣಭೇದ ನೀತಿಯ ವಿರುದ್ಧದ ಕೃತ್ಯಗಳನ್ನು ನಾಟಕದಲ್ಲಿ ತೋರಿಸಲಾಗಿದೆ. ಕಪ್ಪು ವರ್ಣದವರ ವಿರುದ್ಧ ನಡೆದ ಜನಾಂಗೀಯ ಚಿತ್ರಣ ಹಾಗೂ ಪಾತ್ರಗಳ ವರ್ಗ, ಭಾಷೆ ವೈಯಕ್ತಿಕ ಗಡಿ ಮೀರಿ ಒಂದೂಗೂಡಿಸುತ್ತವೆ. ದರೀಧಮ್ ಆಫ್ ವಯಲೆನ್ಸ್ ಆಫ್ರಿಕಾದ ವಿದ್ಯಾರ್ಥಿ ಸಮೂಹವೊಂದು ಜನಾಂಗೀಯ ಹಿಂಸೆಗೆ ಪ್ರತಿಕ್ರಿಯಿಸಿದ ಬಗೆ ಕಣ್ಣಿಗೆ ಕಟ್ಟುವಂತಿದೆ. ವಸ್ಕೊ ವ್ಯವಸ್ಥಾಪಕ ಕೆ.ಎಸ್.ಚೆನ್ನಬಸಪ್ಪ, ಬ್ಯಾಂಕ್ ವ್ಯವಸ್ಥಾಪಕ ಕೆ.ಪ್ರಕಾಶ, ನಿರ್ದೇಶಕ ಗಾಣಿಗರ ವಿರೇಶ್, ಅಂಕಮನಾಳ್ ಸಿದ್ದಪ್ಪ, ಕೊಟ್ರೇಶ್, ದುಂಡೇಶ್ ಹಿರೇಮಠ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net