ಕೋಲ್ಕೊತಾದಲ್ಲಿ ವಿದ್ಯಾರ್ಥಿ ಕೊಲೆ ಖಂಡಿಸಿ ನಿಮ್ಹಾನ್ಸ್ ವೈದ್ಯರ ಪ್ರತಿಭಟನೆ

Raghu_12_Doctors_of_Nimhans_Protest_Aagainst_the_Recent_Rape_&_Murder_@_Kolkatta (2)
Published on

ಬೆಂಗಳೂರು: ಕೋಲ್ಕೊತಾದ ಆರ್.ಜಿ. ಕರ್ ಸರಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಭಾಂಗಣದಲ್ಲಿಯೇ ತರಬೇತಿನಿರತ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ಕೊಲೆ ಮಾಡಿರುವ ಕೃತ್ಯವನ್ನು ಖಂಡಿಸಿ ನಿಮ್ಹಾನ್ಸ್ ವೈದ್ಯರು ಸೋಮವಾರ ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಕೊಲೆಗೆ ಕಾರಣರಾದವನ್ನು ಕೂಡಲೇ ಬಂಧಿಸಬೇಕು. ಇಲ್ಲವೇ ಪ್ರಕರಣವನ್ನು ತಕ್ಷಣ ಸಿಬಿಐಗೆ ವಹಿಸಬೇಕು. ಇದರ ಜತೆಗೆ ವೈದ್ಯರೂ ಸೇರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಸಿಬ್ಬಂದಿ ರಕ್ಷಣಗೆ ಸರ್ಕಾರಿ ಸೂಕ್ತ ಹಾಗೂ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಪ್ರತಿಭಟನಾ ನಿರತ ವೈದ್ಯರು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net