

ಕಲಬುರಗಿ: ಆಳಂದ ತಾಲೂಕಿನ ಸುಕ್ಷೇತ್ರ ನಿಂಬಾಳ ಗ್ರಾಮದ ಶ್ರೀ ಅಮೋಘ ಸಿದ್ಧೇಶ್ವರ ಜಾತ್ರಾ ಮಹೋತ್ಸವ ಆರಂಭಗೊAಡಿದ್ದು, ಜೂ.೬ರಂದು ಪಲ್ಲಕ್ಕಿ ಉತ್ಸವ ನೆರವೇರಲಿದೆ.
ಜಾತ್ರೋತ್ಸವ ಪ್ರಯುಕ್ತ ಮೇ ೨೫ರಿಂದ ಲಚ್ಚಾಣ ಸಿದ್ಧಲಿಂಗೇಶ್ವರ ಮಹಾಪುರಾಣ ಆರಂಭಗೊAಡಿದೆ. ಜೂ.೪ರಂದು ಪುರಾಣ ಮಂಗಲ ಜರುಗಲಿದೆ.ಜೂ.೬ರಂದು ಬಾದಾಮಿ ಅಮಾವಾಸ್ಯೆಯ ದಿನ ಬೆಳಗ್ಗೆ ದೇವರ ಗದ್ದುಗೆಗೆ ಎಲೆ ಪೂಜೆ, ಭಂಡಾರ ಪೂಜೆ ನೆರವೇರಲಿದೆ. ಅಂದು ಮುಂಜಾನೆ ೧೦ ಗಂಟೆಗೆ ಸಿದ್ಧರತ್ನ ಶ್ರೀ ಮದಗೊಂಡೇಶ್ವರ ಮಹಾರಾಜರ ೧೪ನೇ ಪುಣ್ಯಸ್ಮರಣೆ, ಸಂಜೆ ೪ಕ್ಕೆ ಸತ್ಯ ಸಿದ್ಧರ ಪಲ್ಲಕ್ಕಿ ಜರುಗಲಿದೆ. ೭ರಂದು ನಸುಕಿನ ೪ ಗಂಟೆಗೆ ದೇವರ ಹೇಳಿಕೆ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂದು ಜಾತ್ರಾ ಸಮಿತಿ ಮನವಿ ಮಾಡಿದೆ.