

ರಾಮನಗರ: ಕ್ಷೇತ್ರದ ಉಪ ಚುನಾವಣೆಯ ಎನ್ ಡಿ ಎ ಮೈತ್ರಿ ಕೂಟದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಭಾನುವಾರ ಬೆಳಿಗ್ಗೆಯಿಂದಲೇ ಗ್ರಾಮೀಣ ಭಾಗದಲ್ಲಿ ಪ್ರಚಾರ ಆರಂಭಿಸಿದರು.
ತಾಲೂಕಿನ ಗಡಿ ಗ್ರಾಮ ಮಾಕಳಿ ಗ್ರಾಮದಿಂದ ಬೆಳಿಗ್ಗೆ ಪ್ರಚಾರಕ್ಕೆ ಬಂದ ಅವರನ್ನು ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು. ಹೂವಿನಹಾರ ಹಾಕಿ ಘೋಷಣೆ ಕೂಗಿ ಬೆಂಬ ಸೂಚಿಸಿದರು.
ಮಾಕಳಿ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಎಂ.ಸಿ. ಅಶ್ವಥ್ ಅವರ ಊರಾಗಿದೆ.
ಜೆಡಿಎಸದ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎ. ಮಂಜುನಾಥ್, ತಾಲೂಕು ಅಧ್ಯಕ್ಷ ಎಚ್.ಸಿ. ಜಯಮುತ್ತು ಸೇರಿದಂತೆ ಸ್ಥಳೀಯ ಮುಖಂಡರು ಇದ್ದರು.