ಕನ್ನಡಿಗರ ಆತ್ಮಗೌರವ ಮಾರಾಟಕ್ಕಿಲ್ಲ !

JDS_Nikhil
Published on

ತುಮಕೂರು: ಚುನಾವಣೆಗೂ ಮುಂಚೆ "ನಂದಿನಿ ಉಳಿಸಿ' (ಸೇವ್​ ನಂದಿನಿ) ಕನ್ನಡಿಗರ ಆತ್ಮಗೌರವ ಮಾರಾಟಕ್ಕಿಲ್ಲ ಎಂದು ಕಾಂಗ್ರೆಸ್​ ಮುಖಂಡರು ದೊಡ್ಡ ಹೋರಾಟ ಮಾಡಿದ್ದರು. ಆದರೆ ಈಗ ಕಮೀಷನ್​ಗೆ ಅಮೂಲ್​ಗೆ ಗುತ್ತಿಗೆ ಕೊಡುವಂತಹ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ನಿಖಿಲ್​ ಕುಮಾರ್​ ಸ್ವಾಮಿ ಕಿಡಿಕಾರಿದರು.

ಶಿರಾದಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಂದಿನಿ ಉಳಿಸಬೇಕು ಅಂತ ಹಿಂದೆ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಸೇವ್​ ನಂದಿನಿ ಎಂಬ ಹ್ಯಾಶ್​ ಟ್ಯಾಗ್​ ಹಿಡಿದು ಕೈನಲ್ಲಿ ಹಾಲಿನ ಪ್ಯಾಕೇಟ್​ ಹಿಡಿದು ಫೋಟೋಗೆ ಪೋಸ್​ ಕೊಟ್ಟಂತಲ್ಲ. ನಮ್ಮ ನಂದಿನಿಯನ್ನು ಉಳಿಸಬೇಕು. ಇವತ್ತು ಅಧಿಕಾರಕ್ಕೆ ಬರುತ್ತಿದ್ದಂತೆ ನಮ್ಮ ಹೆಮ್ಮೆಯ ನಂದಿನಿಯ್ನ ಕಡೆಗಣಿಸಿದ್ದಾರೆ. ಅಮೂಲ್​ ಸೇರಿದಂತೆ ಬೇರೆ ಬೇರೆಯವರಿಗೆ ಗುತ್ತಿಗೆ ಕೊಡುವಂತಹ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಇವತ್ತು ಡಿಸಿಎಂ ಸಹೋದರ ಬಮುಲ್​ ಅಧ್ಯಕ್ಷ ಹುದ್ದೆ ವಹಿಸಿಕೊಂಡಿದ್ದಾರಲ್ಲ ಅವರೇ ಉತ್ತರ ಕೊಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net