ನಿಖಿಲ್ ನಿಮ್ಮ ಮಡಿಲಿಗೆ ಹಾಕಿದ್ದೇನೆ ಎಚ್ಡಿಕೆ ಭಾವನಾತ್ಮಕ ಮಾತು

666666
Published on

ಚನ್ನಪಟ್ಟಣ

ನನಗೆ ಹಾಗೂ ನನ್ನ ತಂದೆ ಎಚ್.ಡಿ.ದೇವೇಗೌಡರಿಗೆ ಈ ಕ್ಷೇತ್ರದ ಜನತೆ ಅಮೃತ ನೀಡಿದ್ದೀರಿ. ಈಗ ಪುತ್ರ ನಿಖಿಲ್ ನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಆತನ ಭವಿಷ್ಯ ನಿಮ್ಮಗಳ ಮೇಲಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ನಗರದ ತಾಲೂಕು ಕಚೇರಿ ಮುಂಭಾಗ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಮೆರವಣಿಗೆಯ ಮೂಲಕ ನನ್ನ ಕ್ಷೇತ್ರದ ಜನತೆ ಕಾಂಗ್ರೆಸ್ ಗೆ ಉತ್ತರ ಕೊಟ್ಟಿದ್ದೀರಿ. ಈ ಚುನಾವಣೆ ಧರ್ಮ ಹಾಗೂ ಅಧರ್ಮದ ನಡುವಿನ ಹೋರಾಟ. ನೀವು ಕೊಟ್ಟಿರುವ ಅಧಿಕಾರದಿಂದ ಇಡೀ ದೇಶ ನನ್ನನ್ನು ನೋಡುವಂತೆ ಮಾಡಿದೆ. ಕ್ಷೇತ್ರದ ಜನತೆ ನಮ್ಮ ಕುಟುಂಬದ ಮೇಲಿಟ್ಟಿರುವ ಪ್ರೀತಿ ಹಾಗೂ ಅಭಿಮಾನಕ್ಕೆ ಸದಾ ಚಿರ ಋಣಿ ಎಂದರು.

ಡಿಸಿಎಂ ಕ್ಷೇತ್ರದಲ್ಲಿ ನನ್ನ ಸಾಕ್ಷಿಗುಡ್ಡೆ ಕೇಳಿದ್ದಾರೆ. ನಾನು‌ ಸಿಎಂ ಆಗಿದ್ದ ಅಲ್ಫಾವಧಿ‌ವಧಿಯಲ್ಲಿ ಮುಕ್ತವಾಗಿ ಕೆಲಸ ಮಾಡಲು ಈ ಕಾಂಗ್ರೆಸ್ ನವರು ಬಿಡಲಿಲ್ಲ. ಆದರೂ, ರೈತರ ಸಾಲಮನ್ನದ ಜೊತೆಗೆ ಹಲವಾರು ಜನಪರ ಕಾರ್ಯಕ್ರಮಗಳನ್ನು ನಾಡಿಗೆ ನೀಡಿದ್ದೇನೆ. ತಾಲೂಕಿಗೆ ಸಾವಿರಾರು ‌ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ಸತ್ತೇಗಾಲ ಯೋಜನೆ ಸೇರಿದಂತೆ ತಾಲೂಕಿನ ರಸ್ತೆಗಳ ಅಭಿವೃದ್ಧಿ ಸಾಲುಸಾಲು ಅಭಿವೃದ್ಧಿ ಜನರ ಮುಂದಿದೆ. ನಾನು ಕಲ್ಲಿನ‌ ಮೇಲೆ ಹೆಸರು ಬರೆಸಿಕೊಳ್ಳಲು ಇಚ್ಚಿಸಿದವನಲ್ಲ.., ಜನರ ಹೃದಯದಲ್ಲಿ ನೆಲೆಸಲು ಬಯಸಿದವನು. ಕ್ಷೇತ್ರದ ಅಭಿವೃದ್ಧಿಗೆ ನನ್ನ ಕೊಡುಗೆ ಬಗ್ಗೆ ನಿಮ್ಮಿಂದ ಸರ್ಟಿಫಿಕೇಟ್ ಬೇಡ ಎಂದು ಡಿಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸರ್ಕಾರಕ್ಕೆ ಬಡವರ ಬಗ್ಗೆ ಕನಿಷ್ಠ ಕಾಳಜಿ ಇಲ್ಲ. ಬಡವರ ಹಣ ಲೂಟಿ ಹೋಡೆಯುತ್ತಿರುವುದೇ ಅವರ ಸಾಧನೆ. ಸರ್ಕಾರ ಜನರ ಮುಂದೆ ಹಲವು ಸುಳ್ಳು ಹೇಳಿದೆ. 136 ಸೀಟ್ ಗೆದ್ದಿದೇವೆ ಎಂಬ ದುರಾಂಕಾರದಲ್ಲಿ ಜನರನ್ನು ಮರೆತಿದ್ದಾರೆ. ಇವರ ದುರಹಂಕಾರಕ್ಕೆ ಜನತೆ ಪಾಠ ಕಲಿಸಬೇಕು.‌ ಮೂರು ಕ್ಷೇತ್ರಗಳಲ್ಲಿ ಎನ್ಡಿಎ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಸಿಪಿವೈ ಅಭ್ಯರ್ಥಿಯಾಗಲು ಒಪ್ಪಿದೆ!

ಪ್ರಧಾನಿ ಮೋದಿಯವರನ್ನು ಡಿಸ್ಟೆಬಲೈಸ್ ಮಾಡುವ ಕುತಂತ್ರವನ್ನ ಕಾಂಗ್ರೆಸ್ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಮೋದಿ ನಾಯಕತ್ವ ಬಲಪಡಿಸಬೇಕು.

ಹಾಗಾಗಿ, ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನ ಕಣಕ್ಕಿಳಿಸಿದ್ದೇವೆ. ಇದು ದೈವ ಇಚ್ಛೆ.

ಸಾಕಷ್ಟು ಬಿಜೆಪಿ ನಾಯಕರು ಯೋಗೇಶ್ವರ್ ರನ್ನ ಅಭ್ಯರ್ಥಿ ಮಾಡಿ ಅಂತ ಮನವಿ ಮಾಡಿದ್ದರು. ಅದಕ್ಕೆ ನಾನೂ ಸಹ ತಲೆ ಬಾಗಿದೆ. ಆದರೂ ಅವರು‌ ಮೊದಲೇ ತೀರ್ಮಾನ ಮಾಡಿಕೊಂಡು‌ ಕಾಂಗ್ರೆಸ್ ಸೇರಿದ್ದಾರೆ. ಎರಡು ಪಕ್ಷದ ಕಾರ್ಯಕರ್ತರು ಒಗ್ಗೂಡಿ ಚುನಾವಣೆಯಲ್ಲಿ ಶ್ರಮಿಸಬೇಕು. ಇಲ್ಲಿ ಯಾವುದೇ ಪ್ರತಿಷ್ಠೆಯ ವಿಚಾರ ಇಲ್ಲ. ಜನರ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net