ರಾತ್ರಿ ತಪಾಸಣೆ ಚುರುಕು

New Project (4)
Published on

ಕಾಸರಗೋಡು: ತೂಕ, ಅಳತೆ ಮಾಪನ ಇಲಾಖೆ ಜಿಲ್ಲೆಯಲ್ಲಿ ರಾತ್ರಿ ವೇಳೆ ತಪಾಸಣೆಗಾಗಿ ಎರಡು ಪ್ರತ್ಯೇಕ ಸ್ಕ್ವಾಡ್‌ಗಳನ್ನು ರಚಿಸಿ ಕಾರ್ಯಾರಂಭ ಮಾಡಿದೆ. ಶಬರಿಮಲೆ, ಕ್ರಿಸ್‌ಮಸ್, ಹೊಸ ವರ್ಷ ಆಚರಣೆ, ಬೇಕಲ್ ಫೆಸ್ಟ್ ಅನ್ವಯ ವ್ಯಾಪಾರ ಸಂಸ್ಥೆ ಮತ್ತು ಪೆಟ್ರೋಲ್ ಪಂಪ್‌ಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ.

ತೂಕ ಮತ್ತು ಅಳತೆ ಮಾಪನ ಇಲಾಖೆಯ ಉತ್ತರ ವಲಯ ಜಂಟಿ ನಿಯಂತ್ರಣಾಧಿಕಾರಿ ಪಿ.ಶ್ರೀನಿವಾಸ್ ಅವರ ಆದೇಶ ಪ್ರಕಾರ ಉಪ ನಿಯಂತ್ರಕ ಎಸ್.ಎಸ್.ಅಭಿಲಾಷ್, ಟಿ.ಕೆ.ಕೃಷ್ಣಕುಮಾರ್ ನೇತೃತ್ವದಲ್ಲಿ ಜಿಲ್ಲೆಯಲ್ಲಿ ತಪಾಸಣಾ ಕಾರ್ಯ ನಡೆಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net