

ಕಲಬುರಗಿ : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ಶಂಕಿತ ಬಾಂಬರ್ ಕಲಬುರಗಿಗೆ ಬಂದಿದ್ದ ಎಂಬ ಮಾಹಿತಿಯಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐ) ಅಧಿಕಾರಿಗಳ ತಂಡ ಸನ್ ಸಿಟಿ ಕಲಬುರಗಿಯಲ್ಲಿ ಶನಿವಾರ ತೀವ್ರ ಶೋಧ ನಡೆಸುವ ಮೂಲಕ ತನಿಖೆ ಇನ್ನೂ ಚುರುಕುಗೊಳಿಸಿದರು.
ಶಂಕಿತ ಬಾಂಬರ್ ಮತ್ತು ಇನ್ನೊಬ್ಬ ಸೇರಿಕೊಂಡು ಬಳ್ಳಾರಿ ಯಿಂದ ಕಲಬುರಗಿಗೆ ಕೆಎ ೩೨ ಎಫ್-೧೮೮೫ ಸಂಖ್ಯೆಯ ಬಸ್ಸಿನಲ್ಲಿ ಬಂದಿದ್ದಾರೆ ಎಂಬ ಮಾಹಿತಿ ಜಾಡು ಅರಸಿ ಖನಿಖೆಗೆ ಎನ್ ಐ ಕಲಬುರಗಿ ನಗರಕ್ಕೆ ಬಂದಿದೆ.
ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಇರುವ ೧೮ ಸಿಸಿ ಕ್ಯಾಮರಾ ದೃಶ್ಯ ಪರಿಶೀಲಿಸಿ ಅದನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲದೆ ಆ ದಿನ ಕರ್ತವ್ಯದ ಮೇಲಿದ್ದ ಚಾಲಕ ನಿರ್ವಾಹಕರ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದರು.