ಉಗ್ರ ಸಂಘಟನೆಯೊಂದಿಗೆ ಲಿಂಕ್​: ಶಿರಸಿ ಮೂಲದ ಯುವಕನ ಬಂಧನ

NIA
Published on

ಶಿರಸಿ: ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾದ ಶಿರಸಿಯ ಯುವಕನೊರ್ವನನ್ನು ರಾಷ್ಟ್ರೀಯ ತನಿಖಾ ದಳವದರು (ಎನ್.ಐ.ಎ. ) ಬಂಧಿಸಿ, ವಿಚಾರಣೆಗೆ ಕರೆದೊಯ್ದಿದ್ದಾರೆ.

ಶಿರಸಿ ತಾಲೂಕಿನ ಅರೆಕೊಪ್ಪದ ಸಯ್ಯದ್ ಇದ್ರೀಸ್ ಸಬಿ ಸಾಬ ಮುನ್ನಾ (25) ಬಂಧಿತ ಆರೋಪಿಯಾಗಿದ್ದಾನೆ. ಈ ಹಿಂದೆ ಇದೇ ವ್ಯಕ್ತಿಯನ್ನು ತನಿಖಾ ದಳವದರು ಮೂರು ಬಾರಿ ವಿಚಾರಣೆ ನಡೆಸಿದ್ದರು.

ಅರೆಕೊಪ್ಪಕ್ಕೆ ಭೇಟಿ ನೀಡಿದ್ದ ಎನ್.ಐ.ಎ. ಸಿಬ್ಬಂದಿ ಮಂಗಳವಾರ ರಾತ್ರಿ ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿ ಬುಧವಾರ ಪಶ್ಚಿಮ ಬಂಗಾಳಕ್ಕೆ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ. ಪಶ್ಚಿಮ ಬಂಗಾಳ ಮೂಲದ ಎನ್.ಐ.ಎ. ವಿಭಾಗದವರು ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net