ಮುಂದಿನ ಸಿಎಂ ಡಿಕೆಶಿ: ಅಧಿಕಾರ ಹಸ್ತಾಂತರ ಚರ್ಚೆಗೆ ಪುಷ್ಠಿ ನೀಡಿದ ಬಾಲಕೃಷ್ಣ ಮಾತು

balakrishna dks
Published on

ಚನ್ನಪಟ್ಟಣ

ರಾಜ್ಯದಲ್ಲಿ ಮುಖ್ಯಮಂತ್ರಿ ಅಧಿಕಾರ ಹಸ್ತಾಂತರದ ಚರ್ಚೆಗಳು ಕಾಂಗ್ರೆಸ್​ನಲ್ಲಿ ದೊಡ್ಡ ಕೋಲಾಹಲವನ್ನೇ ಸೃಷ್ಠಿಸಿರುವ ನಡುವೆ ಮಾಗಡಿ ಕ್ಷೇತ್ರದ ಶಾಸಕ ಎಚ್​.ಸಿ.ಬಾಲಕೃಷ್ಣ ಆಡಿರುವ ಮಾತೊಂದು ಈಗ ಚರ್ಚೆ ಹುಟ್ಟುಹಾಕಿದೆ.

ಚನ್ನಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಮತದಾರರಿಗೆ ಕೃತಜ್ಱತೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಗೈರು ಹಾಜರಾಗಿದ್ದರು. ಆದರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರು, ಕಾರ್ಯಕ್ರಮಕ್ಕೆ ಇನ್ನೂ ಆಗಮಿಸಿರಲಿಲ್ಲ.

ಈ ವೇಳೆ ಸಭಿಕರನ್ನು ಉದ್ದೇಶಿಸಿ ಮಾತಿಗೆ ಇಳಿದ ಮಾಗಡಿ ಕ್ಷೇತ್ರದ ಶಾಸಕ ಎಚ್​.ಸಿ.ಬಾಲಕೃಷ್ಣ ಎಲ್ಲರನ್ನು ಸ್ಮರಿಸುವ ವೇಳೆ, ಜಿಲ್ಲೆಯ ಮಣ್ಣಿನ ಮಗ, ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಮುಂದೆ ಈ ರಾಜ್ಯದ ಚುಕ್ಕಾಣಿ ಹಿಡಿಯಲು ತಯಾರಾಗಿರುವ ಡಿ.ಕೆ.ಶಿವಕುಮಾರ್​ ಅವರು ಇನ್ನೇನು ನಿಮಿಷಗಳಲ್ಲಿ ವೇದಿಕೆಗೆ ಬರಲಿದ್ದಾರೆ ಎನ್ನುವ ಮೂಲಕ ಇತ್ತೀಚಿಗೆ ರಾಜ್ಯದಲ್ಲಿ ನಡೆಯುತ್ತಿರುವ ಅಧಿಕಾರ ಬದಲಾವಣೆ ಚರ್ಚೆಗೆ ಇಂಬು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net