

ಗದಗ: ಕರೊನಾ ಬಾರದಂತೆ ತಡೆಯಲು ಮಾಸ್ಕ್ ಮತ್ತು ದೈಹಿಕ ಅಂತರವೇ ಮೊದಲ ಅಸ್ತ್ರ. ಅದನ್ನು ವಧು ವರರು ಮದುವೆಯಲ್ಲಿ, ಪರಸ್ಪರ ಹಾರ ಬದಲಾಯಿಸಿಕೊಂಡಂತೆ ಮಾಸ್ಕ್ನ್ನೂ ಬದಲಿಸಿಕೊಂಡಿರುವ ಘಟನೆ ಗದಗದಲ್ಲಿ ನಡೆದಿದೆ.
ಗದಗ ನಗರದ ನೌಕರ ಭವನ ಸಮೀಪದ ನಿವಾಸವೊಂದರಲ್ಲಿ ಈ ರೀತಿಯ ಮದುವೆ ನಡೆದಿದೆ. ಗಾಂಜಿ ಕುಟುಂಬಸ್ಥರು ಈ ರೀತಿಯ ಸರಳ ಮದುವೆ ನಡೆಸಿದ್ದಾರೆ. ವರ ಮಂಜುನಾಥ್ ವಧು ಸವಿತಾಳಿಗೆ ಮಾಸ್ಕ್ ತೊಡಿಸಿದ್ದಾನೆ. ಅದಾದ ನಂತರ ವಧು ಕೂಡ ವರನಿಗೆ ಮಾಸ್ಕ್ ತೊಡಿಸಿದ್ದಾಳೆ.
ಅಂದ ಹಾಗೆ ಈ ಮದುವೆಗೆ ಬಂಧು ಬಳಗದವರನ್ನೂ ಕರೆದಿಲ್ಲವಂತೆ. ಎಲ್ಲರಿಗೂ ಅವರವರ ಮನೆಯಿಂದಲೇ ಆಶೀರ್ವಾದ ಮಾಡುವಂತೆ ತಿಳಿಸಲಾಗಿದೆಯಂತೆ. ಕೆಲವೇ ಕೆಲವು ಕುಟುಂಸ್ಥರ ಸಮ್ಮುಖದಲ್ಲಿ ಮದುವೆ ಕಾರ್ಯಕ್ರಮ ನಡೆಸಲಾಗಿದೆ. ಕರೊನಾ ನಿಯಮವಾಳಿಗಳನ್ನು ಮುರಿಯದೆ ಸರಳವಾಗಿ ದಾಂಪತ್ಯಕ್ಕೆ ಕಾಲಿಟ್ಟ ಜೋಡಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಲಾರಂಭಿಸಿದ್ದಾರೆ.