

ತುಮಕೂರು: ಇತ್ತೀಚೆಗಷ್ಟೇ ಮದುವೆಯಾಗಿದ್ದ ಇಬ್ಬರು ಇಂದು ಜೊತೆಯಾಗಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾತ್ರವಲ್ಲ, ಸಂಬಂಧಿಕರೊಬ್ಬರ ಫೋನ್ ನಂಬರ್ ಬರೆದಿಟ್ಟು ಸಾವಿಗೆ ಮೊರೆ ಹೋಗಿದ್ದಾರೆ.
ತುಮಕೂರಿನ ವಿದ್ಯಾನಗರದಲ್ಲಿ ಹೀಗೆ ನವದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೀಡಾಗಿರುವ ಯುವಕನನ್ನು 25 ವರ್ಷದ ಸಾಗರ್ ಎಂದು ಗುರುತಿಸಲಾಗಿದ್ದು, ಒಟ್ಟಿಗೇ ನೇಣಿಗೆ ಕೊರಳೊಡ್ಡಿರುವ ಪತ್ನಿಯ ಹೆಸರು ಇನ್ನೂ ತಿಳಿದುಬಂದಿಲ್ಲ.
ಇತ್ತೀಚೆಗಷ್ಟೇ ವಿವಾಹವಾಗಿದ್ದ ಇವರು ಪಶ್ಚಿಮಬಂಗಾಳದಿಂದ ಬಂದು ತುಮಕೂರಿನಲ್ಲಿ ನೆಲೆಸಿದ್ದರು ಎಂಬುದು ತಿಳಿದುಬಂದಿದೆ. ಸಾಯುವ ಮುನ್ನ ಸಂಬಂಧಿಕರೊಬ್ಬರ ಫೋನ್ ನಂಬರ್ ಬರೆದಿಟ್ಟಿದ್ದಾರೆ. ಆದರೆ ಆತ್ಮಹತ್ಯೆಗೆ ಕಾರಣ ಏನು ಎಂಬುವುದು ಇನ್ನೂ ಖಚಿತವಾಗಿಲ್ಲ. ಹೊಸ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.