ನವಜಾತ ಶಿಶುವಿನ ಮೇಲೆ ಕೋತಿ ದಾಳಿ

newborn, infant, monkey, attack,
Published on

ನಾಯಕನಹಟ್ಟಿ: ಕೋತಿಯೊಂದು ಮನೆಯೊಳಗೆ ನುಗ್ಗಿ, ಮಲಗಿದ್ದ 13 ದಿನದ ಹೆಣ್ಣು ಶಿಶುವಿನ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಘಟನೆ ಸಮೀಪದ ತೊರೆಕೋಲಮ್ಮನಹಳ್ಳಿಯಲ್ಲಿ ಶನಿವಾರ ನಡೆದಿದೆ.

ಮಂಜುಳ ಸಿದ್ದೇಶ್ ದಂಪತಿಯ ಶಿಶು ಕೋತಿ ದಾಳಿಗೆ ಒಳಗಾಗಿರುವುದು.

ದಂಪತಿಗೆ 13 ದಿನಗಳ ಹಿಂದೆ ಹೆಣ್ಣು ಮಗು ಜನಿಸಿದ್ದು, ಮನೆಯಲ್ಲಿ ಆರೈಕೆ ಮಾಡಲಾಗುತ್ತಿತ್ತು. ಗ್ರಾಮದಲ್ಲಿ ಹಲವು ದಿನಗಳಿಂದ ಕೋತಿಯೊಂದು ಬೀಡು ಬಿಟ್ಟಿತ್ತು. ಶನಿವಾರ ಮಗು ಮನೆಯಲ್ಲಿ ಮಲಗಿದ್ದ ವೇಳೆ ಕೋತಿ ಏಕಾಏಕಿ ದಾಳಿ ಮಾಡಿ ಗಾಯಗೊಳಿಸಿದೆ.

ತಕ್ಷಣವೇ ಮಗುವಿನ ತಾಯಿ ಜೋರಾಗಿ ಕಿರುಚಾಡಿ ಕೋತಿಯನ್ನು ಓಡಿಸಿದ್ದಾರೆ. ಮಗುವಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಚಿತ್ರದುರ್ಗಕ್ಕೆ ಕರೆದುಕೊಂಡು ಹೋಗಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net