

ತುಮಕೂರು: ದೇವರಾಯನದುರ್ಗದ ಜಯಮಂಗಲಿ ಉಗಮ ಸ್ಥಾನದಲ್ಲಿ ಪತ್ತೆಯಾಗಿದ್ದ ಹೊಸ ಜೇಡಕ್ಕೆ "ತೆಂಕಣ ಜಯಮಂಗಲಿ' ಎಂದು ಹೆಸರಿಸಲಾಗಿದೆ.
ಜಿಲ್ಲೆಯ ದೇವರಾಯನದುರ್ಗದ ಜಯಮಂಗಲಿ ಉಗಮ ಸ್ಥಾನ ಪ್ರದೇಶದಲ್ಲಿ ಜೇಡರ ಹುಳು ತಜ್ಞರಾದ ವನ್ಯಜಿವಿ ಜಾಗೃತಿ ನಿಸರ್ಗ ಸಂಸ್ಥೆಯ ಬಿ.ಜಿ.ನಿಶಾ, ಚಿನ್ಮಯ್ ಸಿ.ಮಲಿಯೆ, ಡಬ್ಲೂ ಡಬ್ಲೂ ಎ್ ಸಂಸ್ಥೆಯ ವೈ.ಟಿ.ಲೋಹಿತ್ ಗಿಡಮರಗಳಿಂದ ಬಿದ್ದ ಒಣ ತರಗೆಲೆಗಳಲ್ಲಿ ಜಂಪಿಂಗ್ ಸ್ಪೆ$ಡರ್ ಗುಂಪಿನ ಈ ಜೇಡರ ಹುಳುಗಳ ಆವಾಸ, ವರ್ತನೆಯ ವೈಜ್ಞಾನಿಕ ಅಧ್ಯಯನವನ್ನು ವರ್ಷದ ಹಿಂದೆಯೇ ಕೈಗೊಂಡಿದ್ದರು.
ಇತರೆ ಜೇಡರ ಹುಳುಗಳಿಗಿಂತ ಭಿನ್ನವಾಗಿರುವುದರಿಂದ ಈ ಜೇಡದ ಹೆಣ್ಣು ಮತ್ತು ಗಂಡು ಮಾದರಿಗಳನ್ನು ವಂಶವಾಹಿ ಡಿಎನ್ಎ ಹಾಗೂ ಅಣು ಮಟ್ಟದ ಅಧ್ಯನಕ್ಕಾಗಿ ವಿಜ್ಞಾನಿಗಳಾದ ಜಾನ್ ಕೆಲಬ್, ಕಿರಣ್ ಮರಾಠೆ, ಕೃಷ್ಣಮೇಘ ಕುಂಟೆ ಹಾಗೂ ಕೆನಡಾದ ವೈನೆ ಮ್ಯಾಡಿಸನ್ಗೆ ಕಳುಹಿಸಿಕೊಡಲಾಗಿತ್ತು.
ಬೇರೆ ಜೇಡಗಳ ಜತೆ ಈ ಜೇಡದ ಡಿಎನ್ಎ ಮ್ಯಾಪಿಂಗ್ ಮಾಡಿದಾಗ ಸಂಪೂರ್ಣ ಭಿನ್ನವಾಗಿರುವ ಅಣು ಸಂಯೋಜನೆ ಕಂಡುಬಂದಿರುವುದರಿಂದ ಈ ಹೊಸ ಪ್ರಭೇದಕ್ಕೆ ತೆಂಕಣ ಜಯಮಂಗಲಿ ಎಂದು ನಾಮಕರಣ ಮಾಡಲಾಗಿದೆ. ಹೊಸ ಜಾತಿಗೆ ತೆಂಕಣ (ದಕ್ಷಿಣ ಏಷ್ಯಾ) ಎಂತಲೂ ಮತ್ತು ಪ್ರಭೇದ ಜಯಮಂಗಲಿ ( ಜಯಮಂಗಲಿ ಉಗಮ ಸ್ಥಾನ) ಎಂದು ಹೆಸರಿಸಲಾಗಿದೆ. ಇಂತಹ ವಿಭಿನ್ನ ಲಕ್ಷಣದ ಹೊಸ ಜೇಡದ ಬಗ್ಗೆ ಸಂಶೋಧನಾ ಬರಹ ಅಂತರಾಷ್ಟ್ರೀಯ ನಿಯತಕಾಲಿಕೆ ರ್ಜನಲ್ ಝೂಕೀಸ್ ನಲ್ಲಿ ಅ.11 ರ 2024 ರ ಸಂಚಿಕೆಯಲ್ಲಿ ಪ್ರಕಟವಾಗಿತ್ತು.
ಬೆಂಗಳೂರಿನ ಜೀವ ವಿಜ್ಞಾನ ಕೇಂದ್ರ (ಎನ್ಸಿಬಿಎಸ್) ಮತ್ತು ಯೂನಿವರ್ಸಿಟ್ ಆಫ್ ಬ್ರಿಟಿಷ್ ಕೊಲಂಬಿಯಾ ಲ್ಯಾಬ್ ಸಹಯೋಗದಲ್ಲಿ ಈ ಸಂಶೋಧನೆ ಮಾಡಲಾಗಿತ್ತು.
ಜೇಡಗಳು ಪರಿಸರ ಸಮತೋಲನೆಯಲ್ಲಿ, ಆಹಾರಜಾಲ ಹಾಗೂ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುವ ಈ ಜೀವಿಗಳು ಬೇಸಿಗೆಯಲ್ಲಿ ಬೀಳುವ ಕಾಡಿನ ಬೆಂಕಿಯಿಂದ ನೆಲ ಮಟ್ಟದಲ್ಲಿರುವ ಇಂತಹ ಹಲವು ಜೀವಿಗಳು ಹೊಸ ಪ್ರಪಂಚಕ್ಕೆ ಗೊತ್ತಾಗುವ ಮುನ್ನವೆ ವಿನಾಶ ಹೊಂದುತ್ತವೆ. ಪ್ರಪಂಚದಲ್ಲಿ ಸುಮಾರು 51929 ಪ್ರಭೇದಗಳಿದ್ದರೆ,ನಮ್ಮ ದೇಶದಲ್ಲಿ 1971 ಪ್ರಭೇದಗಳಿವೆ, ತುಮಕೂರು ಜಿಲ್ಲೆಯಲ್ಲೇ ಸುಮಾರು 250 ಕ್ಕು ಹೆಚ್ಚು ಜೇಡರ ಹುಳು ಪ್ರಭೇದಗಳಿವೆ. ಬಿ.ಜಿ.ನಿಶಾ ಜೇಡರ ಹುಳು ತಜ್ಞೆ