ಉತ್ತರ ಕನ್ನಡಕ್ಕೆ ಹೊಸ ಎಸ್‌ಪಿ

New-sp
Published on

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಎಸ್‌ಪಿ ಎನ್.ವಿಷ್ಣುವರ್ಧನ ಅವರನ್ನು ಮೈಸೂರು ಜಿಲ್ಲೆಗೆ ವರ್ಗಾಯಿಸಲಾಗಿದ್ದು, ಕೋಲಾರ ಎಸ್‌ಪಿಯಾಗಿದ್ದ ಎಂ.ನಾರಾಯಣ ಅವರು ನೂತನ ಪೊಲೀಸ್ ಉಕ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ರಾಜ್ಯದ 25 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಆಯೋಗದ ಉಪ ಕಾರ್ಯದರ್ಶಿ ಉಕೇಶ ಕುಮಾರ ಎಸ್. ಮಂಗಳವಾರ ರಾತ್ರಿ ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಉತ್ತರ ಕನ್ನಡ ಎಸ್‌ಪಿ ವರ್ಗಾವಣೆ ಸಹ ಸೇರಿದೆ. 2022 ನವೆಂಬರ್‌ನಿಂದ ಎನ್.ವಿಷ್ಣುವರ್ಧನ ಅವರು ಉತ್ತರ ಕನ್ನಡ ಜಿಲ್ಲೆಯ ಎಸ್‌ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಬುಧವಾರ ಎನ್.ವಿಷ್ಣುವರ್ಧನ ಅವರರಿಗೆ ಅವರ ಕಚೇರಿಯಲ್ಲಿ ಬೀಳ್ಕೊಡಲಾಯಿತು. ನೂತನ ಎಸ್‌ಪಿ ಅವರು ಜು.4 ರಂದು ಬಂದು ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ.
ಭಟ್ಕಳ ಡಿವೈಎಸ್‌ಪಿಯಾಗಿ ಸೇವೆ
ಕರ್ನಾಟಕ ಪೊಲೀಸ್ ಸೇವೆಯ ಅಧಿಕಾರಿಯಾಗಿರುವ ಎಂ.ನಾರಾಯಣ ಅವರು ಈ ಹಿಂದೆ 2012 ರಲ್ಲಿ ಭಟ್ಕಳದಲ್ಲಿ ಡಿವೈಎಸ್‌ಪಿಯಾಗಿ ಸೇವೆ ಸಲ್ಲಿಸಿದ್ದರು. ಬೆಸ್ಕಾಂ ಜಾಗೃತ ದಳದ ಎಸ್‌ಪಿಯಾಗಿದ್ದ ಅವರು 2021 ರ ಡಿಸೆಂಬರ್‌ನಲ್ಲಿ ಐಪಿಎಸ್‌ಗೆ ಭಡ್ತಿ ಹೊಂದಿದ್ದ ಅವರು ಮೊದಲು ಗುಪ್ತಚರ ಇಲಾಖೆ, ನಂತರ 2023 ರ ಜನವರಿಯಲ್ಲಿ ಕೋಲಾರ ಎಸ್‌ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net