

ಕಾರವಾರ: ತಾಲೂಕಿನ ಘಾಡಸಾಯಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ (President) ಬಿಜೆಪಿ ಬೆಂಬಲಿತೆ ಸುಧಾ ಶ್ಯಾಮ ನಾಯ್ಕ ಮಂಗಳವಾರ ಚುನಾಯಿತರಾದರು. ಈ ಹಿಂದೆ ಇದ್ದ ಅಧ್ಯಕ್ಷೆ ಸುವರ್ಣಾ ಲಕ್ಷ್ಮಣ ಗಾಂವಕರ್ ವಿರುದ್ಧ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು. ಇದರಿಂದ ತೆರವಾದ ಸ್ಥಾನಕ್ಕೆ ಸೋಮವಾರ ತಹಸೀಲ್ದಾರ್ ನಿಶ್ಚಲ ನರೋನಾ ನೇತೃತ್ವದಲ್ಲಿ ಚುನಾವಣೆ ನಡೆದಿತ್ತು. ಸುಧಾನ ಶ್ಯಾಮ ನಾಯಕ ಹಾಗೂ ದಿವ್ಯಾ ಪಾವಸ್ಕರ್ ಎಂಬುವವರು ಸ್ಪರ್ಧೆ ಮಾಡಿದ್ದರು.
ಒಟ್ಟು 13 ಸದಸ್ಯ ಬಲದ ಗ್ರಾಪಂನಲ್ಲಿ ಸುಧಾ ಅವರು 9 ಸ್ಥಾನ ಪಡೆದು ಜಯಗಳಿಸಿದರು. ದಿವ್ಯಾ 4 ಸದಸ್ಯರ ಬೆಂಬಲ ಪಡೆಯಲು ಸಾಧ್ಯವಾಯಿತು.