ಕಂಬಳಕ್ಕೆ ನೂತನ ಗೇಟ್ ಸಿಸ್ಟಮ್

kudi kambala
ಕುದಿ ಕಂಬಳದ ಕಾರ್ಯಕ್ರಮದಲ್ಲಿ ಕಂಬಳ ಸಮಿತಿ ಅಧ್ಯಕ್ಷ ಐಕಳ ಬಾವ ಡಾ.ದೇವಿಪ್ರಸಾದ್ ಶೆಟ್ಟಿ, ಗಣನಾಥ ಜೆ.ಶೆಟ್ಟಿ ರವಿಚಂದ್ರ ಶೆಟ್ಟಿ ಐಕಳ ಬಾವ, ಸುಕುಮಾರ್ ಭಂಡಾರಿ ಐಕಳ ಬಾವ, ಸಮಿತಿ ಪದಾಧಿಕಾರಿಗಳಾದ ಚಿತ್ತರಂಜನ್ ಭಂಡಾರಿ, ಪ್ರಕಾಶ್ ಶೆಟ್ಟಿ ಪಡುಹಿತ್ಲು, ಸ್ವರಾಜ್ ಶೆಟ್ಟಿ ಮತ್ತಿತರರು ಇದ್ದರು.
Published on

ಕಿನ್ನಿಗೋಳಿ: ಐಕಳ ಕಂಬಳ ಉತ್ಸವವಾಗಿ ಆಚರಿಸಲ್ಪಡುತ್ತಿದ್ದು ಈ ಬಾರಿ ಕಂಬಳದಲ್ಲಿ ಸಮಯ ಪರಿಪಾಲನೆಗಾಗಿ ಗೇಟ್ ಸಿಸ್ಟಮ್ ಪ್ರಾಯೋಗಿಕವಾಗಿ ಅಳವಡಿಸಲಾಗುತ್ತದೆ, ಈ ಮೂಲಕ ಹೊಸ ಯೋಜನೆಯನ್ನು ಐಕಳ ಕಂಬಳದ ಮೂಲಕ ಪ್ರಾರಂಭಿಸಲಾಗುತ್ತದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಐಕಳ ಬಾವ ಡಾ.ದೇವಿ ಪ್ರಸಾದ್ ಶೆಟ್ಟಿ ಹೇಳಿದರು.

ಫೆಬ್ರವರಿ 3ರಂದು ನಡೆಯಲಿರುವ 48ನೇ ವರ್ಷದ ಐಕಳ ಬಾವ ಕಾಂತಾಬಾರೆ ಬೂದಾಬಾರೆ ಜೋಡುಕರೆ ಕಂಬಳೋತ್ಸವದ ಪೂರ್ವಭಾವಿಯಾಗಿ ಗಣೇಶ್ ಭಟ್ ಹಾಗೂ ವರುಣ್ ಭಟ್ ಅವರ ಧಾರ್ಮಿಕ ವಿಧಿ-ವಿಧಾನದ ನಂತರ ಸಂಪ್ರದಾಯದಂತೆ ಕುದಿ ಕಂಬಳದ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೈವ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಕಂಬಳ ಕರೆಗೆ ಪ್ರಸಾದ ಹಾಕಿ, ಕರೆಯಲ್ಲಿ ಕೋಣಗಳನ್ನು ಇಳಿಸುವ ಮೂಲಕ ಕುದಿ ಕಂಬಳ ನಡೆಯಿತು. ಗಣನಾಥ ಜೆ. ಶೆಟ್ಟಿ, ರವಿಚಂದ್ರ ಶೆಟ್ಟಿ ಐಕಳ ಬಾವ, ಸುಕುಮಾರ್ ಭಂಡಾರಿ ಐಕಳ ಬಾವ, ಸಮಿತಿ ಪದಾಧಿಕಾರಿಗಳಾದ ಚಿತ್ತರಂಜನ್ ಭಂಡಾರಿ, ಪ್ರಕಾಶ್ ಶೆಟ್ಟಿ ಪಡುಹಿತ್ಲು, ಸ್ವರಾಜ್ ಶೆಟ್ಟಿ, ಲೀಲಾಧರ ಶೆಟ್ಟಿ, ದಯಾನಂದ ಶೆಟ್ಟಿ ಐಕಳ, ದೇವಿಪ್ರಸಾದ್ ಶೆಟ್ಟಿ ಐಕಳ, ಅಮರನಾಥ ಶೆಟ್ಟಿ, ಜಯಪಾಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net