ನರೇಗಾದಡಿ ಗ್ರಂಥಾಲಯಕ್ಕೆ ಹೊಸ ಕಟ್ಟಡ

ಕಾನಹೊಸಹಳ್ಳಿ ಸಮೀಪದ ಚಿಕ್ಕಜೋಗಿಹಳ್ಳಿಯ ಗ್ರಂಥಾಲಯಕ್ಕೆ ತಾಪ ಇಒ ನರಸಪ್ಪ ಭೇಟಿ ನೀಡಿದ್ದರು. ಗ್ರಾಪಂ ಅಧ್ಯಕ್ಷ ಎಂ.ಸಿ.ಆಶೋಕನಾಯ್ಕ, ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಶ್, ಮಾಕನಡಕು ಪಿಡಿಒ ಭರತ್ ಕುಮಾರ್, ಗ್ರಂಥಾಲಯದ ಸಹಾಯಕಿ ರಾಧಮ್ಮ ಇದ್ದರು.

Published on

ಕಾನಹೊಸಹಳ್ಳಿ: ಗ್ರಂಥಾಲಯಗಳು ಗ್ರಾಮೀಣ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಜ್ಞಾನದ ಭಂಡಾರವಿದಂತೆ. ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ತಾಪಂ ಇಒ ನರಸಪ್ಪ ಹೇಳಿದರು.

ಚಿಕ್ಕಜೋಗಿಹಳ್ಳಿಯ ಗ್ರಂಥಾಯಕ್ಕೆ ಮಂಗಳವಾರ ಭೇಟಿ ನೀಡಿ ಮಾತನಾಡಿದರು. ಈ ಗ್ರಂಥಾಯಕ್ಕೆ ಐದು ದಶಕಗಳ ಇತಿಹಾಸವಿದೆ. ಓದುಗರಿಗೆ ಸೌಲಭ್ಯದ ಕೊರತೆ ಇದೆ. ಮುಂದಿನ ದಿನಗಳಲ್ಲಿ ಕುರ್ಚಿಗಳನ್ನು ಪೂರೈಸುವ ಮೂಲಕ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ಈಗಿರುವ ಗ್ರಂಥಾಲಯ ಬಯಲುರಂಗ ಮಂದಿರಕ್ಕೆ ಸೇರಿದ್ದು, ಹೊಸ ಗ್ರಂಥಾಲಯ ಕಟ್ಟಡಕ್ಕೆ ಈಗಾಗಲೇ ಸ್ಥಳ ಗುರುತಿಸಲಾಗಿದೆ. ನರೇಗಾ ಯೋಜನೆಯಡಿ ಸ್ವಂತ ಕಟ್ಟಡ ನಿರ್ಮಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದರು. ನಂತರ ನರೇಗಾ ಯೋಜನೆಯಡಿ ನಿರ್ಮಿಸುತ್ತಿರುವ ಗ್ರಾಪಂ ಕಚೇರಿಯ ಎರಡನೇ ಮಹಡಿ ಕಾಮಗಾರಿ ಪರಿಶೀಲಿಸಿದರು.

ಗ್ರಾಪಂ ಅಧ್ಯಕ್ಷ ಎಂ.ಸಿ.ಆಶೋಕ ನಾಯ್ಕ, ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಶ್, ಮಾಕನಡಕು ಪಿಡಿಒ ಭರತ ಕುಮಾರ, ಕಾರ್ಯದರ್ಶಿ ಯು.ಎಂ.ಪ್ರಕಾಶ, ಗ್ರಂಥಾಲಯದ ಸಹಾಯಕಿ ರಾಧಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net