

ಬಂಟ್ವಾಳ: ನೆಟ್ಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕ ಹಬ್ಬ ಶಾಲಾ ಹಳೇ ವಿದ್ಯಾರ್ಥಿಗಳ ಸಂಘದ ಸಹಯೋಗದೊಂದಿಗೆ ಜರುಗಿತು. ಊರ ಹಿರಿಯ ರಾಮಚಂದ್ರ ಬನ್ನಿಂತಾಯ ಧ್ವಜಾರೋಹಣ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ.ವಿದ್ಯಾರ್ಥಿಗಳು ರಚಿಸಿದ ಪಲ್ಲಕ್ಕಿ ಕವನ ಸಂಕಲನ ಬಿಡುಗಡೆಗೊಳಿಸಿದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ವಿದ್ಯಾ ಕುಮಾರಿ, ಶಿಕ್ಷಣ ಸಂಯೋಜಕಿ ಸುಜಾತ, ಸುಧಾ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನಾಗರತ್ನ, ಕಲ್ಲಡ್ಕ ಸಮೂಹ ಸಂಪನ್ಮೂಲ ವ್ಯಕ್ತಿ ಜ್ಯೋತಿ, ಗೋಳ್ತಮಜಲು ಗ್ರಾಮ ಪಂಚಾಯಿತಿ ಸದಸ್ಯ ಸವಿತಾ, ಹರಿಣಾಕ್ಷಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಭಾಸ್ಕರ ಕುಲಾಲ್, ಉಪಾಧ್ಯಕ್ಷೆ ಭವ್ಯ ಕಲ್ಲಗುಡ್ಡೆ ಉಪಸ್ಥಿತರಿದ್ದರು.
ಶಾಲಾ ಪ್ರಭಾರ ಮುಖ್ಯಶಿಕ್ಷಕಿ ಶೋಭಲತ ಬಿ.ಸ್ವಾಗತಿಸಿ, ಶಿಕ್ಷಕಿ ಇಂದಿರ ವಂದಿಸಿದರು. ಶಿಕ್ಷಕರಾದ ಮಹಮ್ಮದ್ ಅಖಿಲ್, ನಿಶ್ಮಿತಾ, ಅಶ್ವಿನಿ ಬಹುಮಾನ ಪಟ್ಟಿ ವಾಚಿಸಿದರು. ಶಾಲೆಯ ಹಿರಿಯ ಶಿಕ್ಷಕ ಪ್ರವೀಣ್ ನಿರೂಪಿಸಿದರು.
ಸಂಜೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಭಾಸ್ಕರ್ ಕುಲಾಲ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕಬಡ್ಡಿಯಲ್ಲಿ ರಾಷ್ಟಮಟ್ಟದಲ್ಲಿ ಸಾಧನೆಗೈದ ಹಳೇ ವಿದ್ಯಾರ್ಥಿಗಳನ್ನು ಹಾಗೂ ಕಲಿಕೆಯಲ್ಲಿ ಸಾಧನೆಗೈದ ಹಳೇ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಯತಿನ್ ಕುಮಾರ್ ಏಳ್ತಿಮಾರ್, ಹರಿಕೃಷ್ಣ ಬಿ.ಎಸ್.ಬರಿಮಾರು, ಹಿರಿಯ ವಿದ್ಯಾರ್ಥಿಗಳಾದ ಮಹಾಬಲ ಗೌಡ ಚನಿಲ, ವಲೇರಿಯನ್ ಅಲ್ಮೇಡಾ, ಗೋಳ್ತಮಜಲು ಗ್ರಾಮ ಪಂಚಾಯಿತಿ ಸದಸ್ಯರಾದ ಸವಿತಾ, ದೀಪಕ್, ಅಭಿಷೇಕ್ ಎನ್., ಪುಷ್ಪಲತಾ ಶೇಖರ್ ಪೂಜಾರಿ ಬೆಂಗಳೂರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಶೋಭಾಲತ ಬಿ.ಸ್ವಾಗತಿಸಿ. ಶಾಲೆಯ ಹಿರಿಯ ವಿದ್ಯಾರ್ಥಿ ಮನೋಜ್ ಕುಮಾರ್ ನಿರೂಪಿಸಿದರು.