

ಬೆಂಗಳೂರು: ನೇತಾಜಿ ಸುಭಾಷಚಂದ್ರ ಬೋಸ್ 1943ರಲ್ಲಿ ಸಿಂಗಾಪುರದಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಪರ್ಯಾಯ ಸರ್ಕಾರ ಸ್ಥಾಪಿಸಿ 80 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ರಾಷ್ಟ್ರಗೌರವ ಸಂರಕ್ಷಣ ಪರಿಷತ್ 81ನೇ ವಾರ್ಷಿಕೋತ್ಸವ ಮತ್ತು ವಿಶೇಷ ವಿದೇಶ ಪ್ರವಾಸವನ್ನು ಹಮ್ಮಿಕೊಂಡಿರುವುದಾಗಿ ಪರಿಷತ್ತಿನ ಅಧ್ಯಕ್ಷ ಟಿ.ಎನ್.ರಾಮಕೃಷ್ಣ ತಿಳಿಸಿದ್ದಾರೆ.
ಸಿಂಗಾಪೂರ, ಥಾಯ್ಲೆಂಡ್, ಮಲೇಷಿಯಾದ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಆಯೋಜಿಸಿರುವ ವಿದೇಶ ಪ್ರವಾಸವು ಅ.13 ರಿಂದ 11 ದಿನಗಳ ಕಾಲ ಇರಲಿದೆ. ಪ್ರವಾಸದ ಜೊತೆಗೆ ನೇತಾಜಿ ಸ್ಮರಣೆಯ ಅಂತರಾಷ್ಟ್ರೀಯ ಕಾರ್ಯಕ್ರಮವನ್ನು ಸಿಂಗಾಪೂರ ಮತ್ತು ಕೌಲಾಲಂಪುರದಲ್ಲಿ ಏರ್ಪಡಿಸಲಾಗಿದ್ದು ಸುಭಾಷಚಂದ್ರ ಬೋಸ್ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಗುವುದು.
ಇದೇ ವೇಳೆ ಕರ್ನಾಟಕ ಪ್ರೆಸ್ ಕೌನ್ಸಿಲ್ ಸಿಂಗಾಪೂರದಲ್ಲಿ ಏರ್ಪಡಿಸಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪ್ರವಾಸಿಗರಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ದೂ. 98456 72560 ಸಂಪರ್ಕಿಸಬಹುದು.