

ನೇಸರಗಿ: ಗ್ರಾಮದ ದೇವಸ್ಥಾನಗಳ ಅಭಿವದ್ಧಿಗೆ ದಾನಿಗಳ ಸಹಕಾರ ಅಗತ್ಯ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಸಮೀಪದ ನಾಗನೂರ ಗ್ರಾಮದಲ್ಲಿ ಮಂಗಳವಾರ ಗ್ರಾಮದೇವಿ ದೇವಸ್ಥಾನದ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಗ್ರಾಮದೇವತೆ ಕಟ್ಟಡ ನಿರ್ಮಾಣಕ್ಕೆ ಸ್ವಂತ ದೇಣಿಗೆ ನೀಡುವುದರ ಜತೆಗೆ ಸರ್ಕಾರದಿಂದ ಅನುದಾನ ತರಲು ಶ್ರಮಿಸಲಾಗುವುದು ಎಂದರು.
ಮಾಜಿ ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ರಾಮಮಂದಿರ ಕಟ್ಟಲು ರಾಮನ ಭಕ್ತರು ದೇಣಿಗೆ ನೀಡಿದಂತೆ ಗ್ರಾಮದ ಭಕ್ತರು ಗ್ರಾಮ ದೇವಿಗುಡಿ ನಿರ್ಮಾಣಕ್ಕೆ ದೇಣಿಗೆ ನೀಡುತ್ತಿರುವ ಕಾರ್ಯ ಶ್ಲಾನೀಯ. ಗ್ರಾಮ ದೇವತೆ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡುವುದರ ಜತೆಗೆ ಸಂಸದರ ಅನುದಾನದಲ್ಲಿ ಅಭಿವೃದ್ಧಿಗೆ ಸಹಕರಿಸಲಾಗುವುದು ಎಂದರು.
ಉದ್ಯಮಿ ಸಂತೋಷ ಇಂಚಲ ಮಂದಿರ ನಿರ್ಮಾಣಕ್ಕೆ 25 ಲಕ್ಷ ರೂ. ದೇಣಿಗೆ ನೀಡಿದ್ದಕ್ಕೆ ಸನ್ಮಾನಿಸಲಾಯಿತು. ನಾಗನೂರ ರುದ್ರಾಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ಶೇಗುಣಸಿ ಮಠದ ಡಾ.ಮಹಾಂತಪ್ರಭು ಸ್ವಾಮೀಜಿ ಮಾತನಾಡಿದರು. ಲಕ್ಷಿ$್ಮ ಇನಾಮದಾರ, ಸುನೀಲ ಪಾಟೀಲ, ಗ್ರಾಪಂ ಅಧ್ಯೆ ಬಸವ್ವ ಶಿರಸಂಗಿ, ಉದ್ಯಮಿ ಸಂತೋಷ ಇಂಚಲ, ರೇಣುಕಾ ಭಾಂವಿ, ಗ್ರಾಮದೇವಿ ಜೀಣೋರ್ದ್ಧಾರ ಕಮಿಟಿ ಅಧ್ಯ ಸುರೇಶ ಖನ್ನಿನಾಯ್ಕರ, ಪಿಡಿಒ ಶಿವಾನಂದ ಕಲ್ಲೂರ, ಶಿಲ್ಪಿ ಜಯಂತ ಮುರ್ಡೇಶ್ವರ, ಟಿಸಿಒ ವಿ.ಬಿ. ಗೀರನವರ, ಬ್ಯಾಂಕ್ ನಿರೀಕ ಸುರೇಶ ಮತ್ತಿಕೊಪ್ಪ, ವ್ಯವಸ್ಥಾಪಕ ಸೋಮನಾಥ ಪಾಟೀಲ, ಮಹಾಬಳೇಶ್ವರ ಕಡಕೋಳ, ಸುರೇಶ ಪಾಟೀಲ, ಮಹೇಶ ಪಾಟೀಲ, ಗ್ರಾಪಂ ಸದಸ್ಯ ಬಸವರಾಜ ಉಣಕಲ್ಲ, ಸಿ.ಎನ್. ನಾಯ್ಕರ, ನೇತ್ರಾ ಇಂಚಲ ಇದ್ದರು.