

ಕಲಬುರಗಿ : ಜಿಲ್ಲೆಯ ಬೆಣ್ಣೆತೋರಾ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಸಂಭಾವ್ಯ ನೆರೆ ಹಾವಳಿ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಪರಿಹಾರ ಕಾರ್ಯಗಳ ಕುರಿತಂತೆ ಜನವರಿ 11 ರಂದು ಕಮಲಾಪುರ ತಾಲೂಕಿನ ಕುರಿಕೋಟಾ ಗ್ರಾಮದಲ್ಲಿ ಬೆಳಿಗ್ಗೆ 9 ಗಂಟೆಗೆ ರಾಜ್ಯ ಮಟ್ಟದ ಅಣಕು ಪ್ರದರ್ಶನ ನಡೆಯಲಿದೆ.
ನೆರೆ ಹಾವಳಿ ಪರಿಹಾರ ಕಾರ್ಯಕ್ಕೆ ತುಂಬಾ ಉಪಯುಕ್ತವಾದ ಈ ಅಣುಕು ಪ್ರದರ್ಶನಕ್ಕೆ ವಿವಿಧ ಕಾರ್ಯಕ್ಕೆ ಮತ್ತು ತುರ್ತು ನಿರ್ವಹಣೆಗೆ ನಿಯೋಜನೆಗೊಂಡ ಎಲ್ಲಾ ಅಧಿಕಾರಿಗಳು ನಿಗದಿತ ಸಮಯಕ್ಕೆ ಪರಿಹಾರ ಸ್ಥಳದಲ್ಲಿ ಹಾಜರಿರುವಂತೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಆದೇಶಿಸಿ ಅಧಿಕಾರಿಗಳಿಗೆ ಕರ್ತವ್ಯದ ಜವಾಬ್ದಾರಿ ನೀಡಿದ್ದಾರೆ.
ನೆರೆ ಹಾವಳಿ ಅಲರ್ಟ್ ಸಿಗುತ್ತಿದ್ದಂತೆ ಜನರಿಗೆ ಮಾಹಿತಿ ನೀಡುವುದು, ರಕ್ಷಣಾ ಕಾರ್ಯ ಕೈಗೊಳ್ಳುವುದು, ಜನರನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸುವುದು, ಅಂಬುಲೆನ್ಸ್, ವೈದ್ಯಕಿಯ ಚಿಕಿತ್ಸೆ, ಊಟೋಪಚಾರ ಹೀಗೆ ಎಲ್ಲಾ ರೀತಿಯ ರಕ್ಷಣಾ ಕಾರ್ಯಗಳು ಅಣುಕು ಪ್ರದರ್ಶನದಲ್ಲಿ ಕಾಣಲಿದೆ.