ಎನ್‌ಇಪಿಯಿಂದ ಜಾರಿಯಿಂದ ಆಮೂಲಾಗ್ರ ಬದಲಾವಣೆ

Mithileshkumar
Published on

ಕಲಬುರಗಿ: ಶಿಕ್ಷಣ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ನೂತನವಾಗಿ ಜಾರಿ ಮಾಡಿರುವ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯಿಂದಾಗಿ ಆಮೂಲಾಗ್ರ ಬದಲಾವಣೆ ಸಾಧ್ಯವಾಗುತ್ತಿದೆ ಎಂದು ಕೇಂದ್ರೀಯ ವಿದ್ಯಾಲಯ ಪ್ರಾಚಾರ್ಯ ಮಿಥಿಲೇಶಕುಮಾರ್ ಹೇಳಿದರು.
ನಗರದ ಕೇಂದ್ರೀಯ ವಿದ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿ ಮಾಡಿರುವ ಈ ನೂತನ ನೀತಿಯನ್ನು ವಿದ್ಯಾಲಯದಲ್ಲಿ ಕಳೆದ ಮೂರು ವರ್ಷಗಳಿಂದ ಸಮರ್ಪಕವಾಗಿ ಜಾರಿ ಮಾಡಲಾಗಿದೆ. ಎನ್‌ಇಪಿ ಪ್ರಕಾರ ಜಾದುಕಾ, ವಿದ್ಯಾಪ್ರವೇಶ, ವಿದ್ಯಾಂಜಲಿ, ಪಿಟಾರಾ, ನಿಪುಣ ಸೇರಿ ಇತರೆ ಹೊಸ ನೀತಿ ಮೂಲಕ ವಿದ್ಯಾರ್ಥಿಗಳಿಗೆ ಕೌಶಲಭರಿತ ಶಿP್ಷÀಣ ನೀಡಲಾಗುತ್ತಿದೆ ಎಂದರು.
ಮಕ್ಕಳಿಗೆ ೮ ವರ್ಷದವರೆಗೆ ಆಟ ಆಡುತ್ತ ಪಾಠ ಕಲಿಸುವುದು, ೩ನೇ ತರಗತಿ ೮ನೇ ವರ್ಷದಿಂದ ೧೧ನೇ ವರ್ಷ ಎರಡನೇ ಭಾಗ, ೧೧ರಿಂದ ೧೪ ಮೂರನೇ ಭಾಗ ಹಾಗೂ ೧೪-೧೮ ವರ್ಷದವರೆಗೆ ನಾಲ್ಕನೆ ಭಾಗವಾಗಿ ಇದನ್ನು ವಿಂಗಡಿಸಲಾಗಿದೆ ಎಂದು ವಿವರಿಸಿದರು.
ಕೇಂದ್ರೀಯ ವಿದ್ಯಾಲಯದ ಪ್ರಭಾರಿ ಪ್ರಾಚಾರ್ಯ ಪ್ರಹ್ಲಾದ ಸಂಗನಾಲೆ, ಕಿಶೋರ ಗಾಯಕವಾಡ್, ಶಂಕರಗೌಡ ಹೊಸಮನಿ, ಎಸ್.ಪಿ.ವಾಘ್ಮೋರೆ, ಶ್ರೀನಿವಾಸ, ಮಲ್ಲಿಕಾರ್ಜುನ ಪಾಸೋಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net