ಜಾಗತಿಕ ಸ್ಪರ್ಧೆಗೆ ಪೂರಕ ಎನ್​ಇಪಿ

24HNL1- ABVP PROTEST
Published on

ಹಾನಗಲ್ಲ: ನೂತನ ಶಿಕ್ಷಣ ನೀತಿ (ಎನ್​ಇಪಿ) ಯಲ್ಲಿ ಜಾಗತಿಕ ಸ್ಪರ್ಧೆಗೆ ಪೂರಕವಾದ, ಕೌಶಲಾಧಾರಿತ ಹಾಗೂ ಸ್ಥಳೀಯ ಭಾಷಾ ಅಭಿವೃದ್ಧಿಗೆ ಪೂರಕವಾಗುವಂತಹ ಅಂಶಗಳಿದ್ದು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ರಾಜ್ಯ ಸರ್ಕಾರ ಎನ್​ಇಪಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು, ವಿದ್ಯಾರ್ಥಿಗಳು ತಹಸೀಲ್ದಾರ್​ರಿಗೆ ಮನವಿ ಸಲ್ಲಿಸಿದರು.

ಗುರುವಾರ ಪಟ್ಟಣದ ಎನ್​ಸಿಜೆಸಿ ಕಾಲೇಜು ಆವರಣದಿಂದ ತಹಸೀಲ್ದಾರ್ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಎಬಿವಿಪಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ರಾಜ್ಯ ಸರ್ಕಾರ ಎನ್​ಇಪಿ ಯೋಜನೆ ಹಿಂಪಡೆಯುತ್ತಿರುವುದನ್ನು ಖಂಡಿಸಿ ಉಪತಹಸೀಲ್ದಾರ್ ಟಿ.ಕೆ. ಕಾಂಬಳೆ ಅವರಿಗೆ ಮನವಿ ಸಲ್ಲಿಸಿದರು.

ನೂತನ ಶಿಕ್ಷಣ ನೀತಿ ರಚಿಸುವ ಸಂದರ್ಭದಲ್ಲಿ ಎಲ್ಲ ರಾಜ್ಯಗಳ ಶಿಕ್ಷಣ ತಜ್ಞರು, ಶಿಕ್ಷಣ ಕ್ಷೇತ್ರದ ಚಿಂತಕರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಹಲವು ಬಾರಿ ಸಭೆ ನಡೆಸಿ, ಸಾಧಕ-ಬಾಧಕಗಳನ್ನು ರ್ಚಚಿಸಿ, ಜಾಗತಿಕ ಮಟ್ಟದ ಸ್ಪರ್ಧೆಗೆ ಸಹಕಾರಿಯಾಗುವ ಅಂಶಗಳನ್ನು ಅಳವಡಿಸಲು ತೀರ್ವನಿಸಲಾಗಿದೆ. ಎನ್​ಇಪಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ದೇಶಾದ್ಯಂತ ಯಾವುದೇ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಳ್ಳುವಲ್ಲಿ ಸಹಕಾರಿಯಾಗುವಂಥ ವಿಷಯಗಳನ್ನು ಒಳಗೊಂಡಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಎಬಿವಿಪಿ ತಾಲೂಕು ಸಂಚಾಲಕ ಪ್ರಸಾದ ಶೀಮಂಡನವರ, ನಗರ ಕಾರ್ಯದರ್ಶಿ ರಾಘವೇಂದ್ರ ಜಾಧವ, ಕಾರ್ಯಕರ್ತರಾದ ಶಶಾಂಕ ಮಡಿವಾಳರ, ಅಮೃತ ನಡುವಿನಮನಿ, ರಾಘವೇಂದ್ರ ಪಾರಕ್ಕನವರ, ಶಿವಕುಮಾರ ಆಲದಕಟ್ಟಿ, ಚಂದ್ರಶೇಖರ ನೆಲ್ಲಿಕೊಪ್ಪ, ವಿದ್ಯಾರ್ಥಿಗಳಾದ ಚಂದನ್, ರಾಕೇಶ್, ಐಶ್ವರ್ಯ, ರೋಹಿಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net