ಎನ್ ಇ ಪಿ : ಶಿಕ್ಷಣ ತಜ್ಞರ ವಿಶೇಷ ಸಭೆ ನಾಳೆ ; ಕೋಗನೂರ ಹೇಳಿಕೆ

ರಾಷ್ಟೀಯ ಶಿಕ್ಷಣ ನೀತಿ-೨೦೨೦ಯನ್ನು  ರಾಜ್ಯದಲ್ಲಿ ಪರಿಣಾಮಕಾರಿ ಅನುಷ್ಠಾನಗೊಳಿಸಲು ಯಾವ ತೆರನಾದ ಹೆಜ್ಜೆ ಇರಿಸಬೇಕು ಎಂಬುದರ  ಕುರಿತು ಚರ್ಚೆ ನಡೆಸಲು ನಗರದ  ಪಬ್ಲಿಕ್ ಗಾರ್ಡನ್‌ದಲ್ಲಿನ ರೋಟರಿ ಶಾಲೆಯ ಸಭಾಂಗಣದಲ್ಲಿ  ಅ.೮  ರಂದು  ಬೆಳಗ್ಗೆ ೧೧ಕ್ಕೆ ಶಿP್ಷÀಣ ತಜ್ಞರ ವಿಶೇಷ ಸಭೆ ಕರೆಯಲಾಗಿದೆ ಎಂದು
IMG-20231006-WA0015
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ರಾಷ್ಟೀಯ ಶಿಕ್ಷಣ ನೀತಿ-೨೦೨೦ಯನ್ನು  ರಾಜ್ಯದಲ್ಲಿ ಪರಿಣಾಮಕಾರಿ ಅನುಷ್ಠಾನಗೊಳಿಸಲು ಯಾವ ತೆರನಾದ ಹೆಜ್ಜೆ ಇರಿಸಬೇಕು ಎಂಬುದರ  ಕುರಿತು ಚರ್ಚೆ ನಡೆಸಲು ನಗರದ  ಪಬ್ಲಿಕ್ ಗಾರ್ಡನ್‌ದಲ್ಲಿನ ರೋಟರಿ ಶಾಲೆಯ ಸಭಾಂಗಣದಲ್ಲಿ  ಅ.೮  ರಂದು  ಬೆಳಗ್ಗೆ ೧೧ಕ್ಕೆ ಶಿP್ಷÀಣ ತಜ್ಞರ ವಿಶೇಷ ಸಭೆ ಕರೆಯಲಾಗಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯರಾದ ನ್ಯಾಯವಾದಿ ರಾಘವೇಂದ್ರ ಕುಲಕರ್ಣಿ ಕೊಗನೂರ ತಿಳಿಸಿದರು.
ಪೀಪಲ್ಸï ಫೋರಮ್ ಫಾರ್ ಕರ್ನಾಟಕ ಎಜುಕೇಷನ್ ಕಲಬುರಗಿಯ ಸಂಘಟನೆಯ ನೇತೃತ್ವದಲ್ಲಿ  ಈ ವಿಶೇಷ  ಸಭೆಯನ್ನು ಕರೆಯಲಾಗಿದೆ. ಎಲ್ಲರು ಸೇರಿಕೊಂಡು ಚರ್ಚೆ ನಡೆಸಿ ವಿದ್ಯಾರ್ಥಿಗಳ ಕೌಶಲ ಹೆಚ್ಚಿಸಲು ಶಿಕ್ಷಣ ತಜ್ಞರು ಇಡಬೇಕಾಗಿರುವ ಹಜ್ಜೆ ಕುರಿತು ಸಮಾಲೋಚನೆ ನಡೆಸಲಾಗುವುದು ಎಂದು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರಿನ ಸೆಸ್ ಸಂಸ್ಥೆ ನಿರ್ದೇಶಕ ಗೌರೀಶ ವಿಷಯ ಮಂಡಿಸುವರು.  ವಿಶ್ರಾಂತ ಜಿ¯್ಲÁ ನ್ಯಾಯಾಧೀಶ ಕಾಡ್ಲೂರು ಸತ್ಯನಾರಾಯಣಾಚಾರ್ಯ, ಎಬಿಆರ್‌ಎಸ್‌ಎಂ ದಕ್ಷಿಣ ಕ್ಷೇತ್ರಿಯ ಪ್ರಮುಖ ಡಾ.ರಘು ಅಕಮಂಚಿ ಅತಿಥಿಗಳಾಗಿರುವರು. ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾಯದರ್ಶಿ ಬಸವರಾಜ ದೇಶಮುಖ ಅಧ್ಯP್ಷÀತೆ ವಹಿಸುವರು ಎಂದು ಹೇಳಿದರು.
 ಗುವಿವಿ ಸಿಂಡಿಕೇಟï ಸದಸ್ಯ ರಾಘವೇಂದ್ರ ಭೈರಪ್ಪ, ಅಕ್ಕಮಹಾದೇವಿ ಮಹಿಳಾ ವಿವಿ ಸಿಂಡಿಕೇಟï ಸದಸ್ಯ ಶ್ರೀಪಾದ  ಚವಡಾಪುರಕರ್, ಡಾ. ಪಲ್ಲವಿ ಪಾಟೀಲï, ರಾಘವೇಂದ್ರ ಕುಲಕರ್ಣಿ  ಇತರರು ಪಾಲ್ಗೊಳ್ಳುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಾಘವೇಂದ್ರ ಎಂ, ಈಶ್ವರ ಬಾಳಿ  ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net