

ಮೂಲ್ಕಿ: ಕುಬೆವೂರು ಶ್ರೀ ಜಾರಂದಾಯ ದೈವಸ್ಥಾನದ ಶ್ರೀ ಜಾರಂದಾಯ ಮತ್ತು ಬಂಟ ದೈವದ ಗಡು ನೇಮ ವಿಜೃಂಭಣೆಯಿಂದ ನಡೆಯಿತು.
ಬುಧವಾರ ಮಧ್ಯಾಹ್ನ ಗಡುವಿನಲ್ಲಿ ಮಹಾ ಅನ್ನಸಂತರ್ಪಣೆ, ಕುಬೆವೂರು ಗುತ್ತಿನಿಂದ ದೈವಸ್ಥಾನಕ್ಕೆ ಭಂಡಾರ ಹೊರಡುವುದು, ದೀಪಾರಾಧನೆ ಬಲಿ, ದೈವಸ್ಥಾನದಿಂದ ಗಡುವಿಗೆ ಭಂಡಾರ ಹೊರಡುವುದು, ರಾತ್ರಿ ಶ್ರೀ ಜಾರಂದಾಯ ಮತ್ತು ಬಂಟ ದೈವದ ಗಡು ನೇಮ, ಶ್ರೀ ಕೋರ್ದಬ್ಬು ದೈವದ ಭೇಟಿ ನಡೆಯಿತು.
ಕಿಲ್ಪಾಡಿ ಗ್ರಾ.ಪಂ. ಅಧ್ಯಕ್ಷ ವಿಕಾಸ್ ಶೆಟ್ಟಿ, ಸದಸ್ಯ ರಾಜೇಶ್, ಮುರಳೀಧರ ಭಂಡಾರಿ ಕುಬೆವೂರು, ಶಂಭು ಶೆಟ್ಟಿ, ವಿಜಯ ಕುಮಾರ್ ಕುಬೆವೂರು, ಸತೀಶ್ ಶೆಟ್ಟಿ, ಶ್ರೀಕಾಂತ್ ಶೆಟ್ಟಿ ಕೆಂಚನಕೆರೆ, ಮೋಹನ್ದಾಸ್ ಶೆಟ್ಟಿನಾಗರಾಜ ಕುಲಾಲ್, ಅಶ್ವಿನ್ ಆಳ್ವ, ಜಯ ಕುಮಾರ್ ಕುಬೆವೂರು, ಅವಿನಾಶ್ ಶೆಟ್ಟಿ ಪುನರೂರು ಬಾಳಿಕೆ ಮನೆ, ಚಂದ್ರಶೇಖರ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ದಿವಾಕರ ಶೆಟ್ಟಿ, ಗೌರೀಶ್, ಗಣೇಶ್ ಎಂ.ಶೆಟ್ಟಿ, ಪ್ರಶಾಂತ ಶೆಟ್ಟಿ ಮುಂಬೈ, ಮೋಹನ್ ಕುಬೆವೂರು, ಜೀರ್ಣೋದ್ಧಾರ ಸಮಿತಿ, ಶ್ರೀ ಜಾರಂದಾಯ ಸೇವಾ ಮಿತ್ರ ಮಂಡಳಿ, ಮಹಿಳಾ ಮಂಡಳಿ, ಮುಂಬೈ ಸಮಿತಿ ಉಪಸ್ಥಿತರಿದ್ದರು.